ಜಿಲ್ಲೆ

ಪರಿಸರ ಉಳಿದರೆ ಜೀವರಾಶಿ ಉಳಿಯಲು ಸಾಧ್ಯ

ಪ್ರಸಿನ್ ಕೆ.ಆರ್

ಮದ್ದೂರು: ಪರಿಸರ ಉಳಿದರೆ ಮಾತ್ರ ಭೂ ಮಂಡಲ ಸಕಲ ಜೀವರಾಶಿಗಳು ಬದುಕುಳಿಯಲು ಸಾಧ್ಯ ಎಂದು ಉಜ್ಜೀವನ್ ಬ್ಯಾಂಕ್ ವ್ಯವಸ್ಥಾಪಕ ಶ್ರೀಕಾಂತ್ ಹೇಳಿದರು.

ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಉಜ್ಜೀವನ್ ಬ್ಯಾಂಕ್ ಮದ್ದೂರು ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾನವನ ದುರಾಸೆ ಹಾಗೂ ಆಧುನಿಕರಣ ನೆಪದಲ್ಲಿ ಅರಣ್ಯ ಸಂಪತ್ತು ಲೂಟಿ ಮಾಡಲಾಗುತ್ತಿದೆ. ಇದರಿಂದ ಪರಿಸರ ನಾಶವಾಗಿ ಜನರಿಗೆ ರೋಗ ರುಜೀನಗಳು ಹೆಚ್ಚಾಗುತ್ತಿದೆ. ಇದನ್ನು ಹೋಗಲಾಡಿಸಬೇಕಾದರೆ ಪ್ರತಿಯೊಬ್ಬರು ಪರಿಸರ ಉಳಿಸಲು ಮುಂದಾಗಬೇಕೆಂದರು.

ಬ್ಯಾಂಕ್‌ನ ಬಿ.ಸಿ.ಅಭಿಷೇಕ, ಎನ್.ಮಹೇಶ್, ಅಭಿಸಾಗರ್, ಕಿರಣ್, ಬಸವರಾಜು, ಅಭಿಲಾಷ್, ಸುನೀಲ್, ಪ್ರಾಂಶುಪಾಲ ಪ್ರೊ.ಕೆ.ಬಿ.ನಾರಾಯಣ ಇದ್ದರು.