ಜಿಲ್ಲೆ

ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿ

ವಿದ್ಯಾ ಶೆಟ್ಟನಗೌಡ್ರ

ನಿಪ್ಪಾಣಿ: ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಕ್ರಿಯ ಜೀವನ ನಡೆಸಬೇಕು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ನಗರದ ಶಿವಶಂಕರ ಜೊಲ್ಲೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿರಬೇಕು ಎಂದರು.

ಪ್ರಾಂಶುಪಾಲೆ ಉರ್ಮಿಳಾ ಚೌಗಲಾ, ದೀಪಕ ಪಾಟೀಲ, ವಿಜಯ ನಾಯಿಕ, ಗುರುನಾಥ ಸದಲಗೆ, ಆರ್.ವಿ.ಖೋತ, ಸೀಮಾ ಪಾಟೀಲ ಇದ್ದರು.