ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿಲ್ಲಿರುವ ಮಠದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಗೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ನಾಗರಿಕ ವೇದಿಕೆ ಮುಖಂಡರು ಫಲತಾಂಬೂಲ ನೀಡಿ ಪೌರ ಸನ್ಮಾನ, ಅಭಿನಂದನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಎ.ಎಸ್.ಚನ್ನಬಸಪ್ಪ, ಎಂ.ಟಿ.ಅಣ್ಣೇಗೌಡ, ಎಂ.ಟಿ.ಕುಮಾರ್, ಕೆ.ಪಿ.ಪ್ರಭುಶಂಕರ್ ಇದ್ದರು. 
ಜಿಲ್ಲೆ

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗೆ ಆಹ್ವಾನ

ಕೆ.ಆರ್.ನಗರ: ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಸಮುದಾಯ ಭವನದಲ್ಲಿ ಜು.7ರಂದು ನಡೆಯಲಿರುವ ಮೈಸೂರು ಮತ್ತು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ ಅವರ ಪೌರ ಸನ್ಮಾನ ಮತ್ತು ಡಾ.ಸಾ.ರಾ.ಧನುಷ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸುವ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಸೋಮವಾರ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ನಾಗರಿಕ ವೇದಿಕೆಯ ಮುಖಂಡರು ಫಲತಾಂಬೂಲ ನೀಡಿ, ಆಹ್ವಾನಿಸಿದರು.

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮಠದಲ್ಲಿ ಶ್ರೀಗೆ ಆಹ್ವಾನ ಪತ್ರಿಕೆ ನೀಡಿದ ಬಳಿಕ ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ ಮಾತನಾಡಿ, ಪಟ್ಟಣದ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಬಳ್ಳೂರು ಬಳಿ ಚಾಮರಾಜ ಅಣೆಕಟ್ಟು ನಿರ್ಮಿಸಿ ಸಾವಿರಾರು ರೈತರ ಜಮೀನಿಗೆ ನೀರನ್ನು ಒದಗಿಸಿ ಭತ್ತದ ನಾಡು ಕಟ್ಟಿದರು. ಅವರ ಕುಟುಂಬದ ಸಂಸದರಿಗೆ ಪೌರ ಸನ್ಮಾನ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.

ಅಲ್ಲದೆ ವೈದ್ಯಕೀಯ ಕ್ಷೇತ್ರದಲ್ಲಿ ಬಡವರು, ಮಧ್ಯಮ ವರ್ಗದ ಕುಟುಂಬಕ್ಕೆ ಉಚಿತವಾಗಿ ವೈದ್ಯಕೀಯ ಸೇವೆ ನೀಡುವ ಡಾ.ಸಾ.ರಾ.ಧನುಷ್ ಅವರು ಸ್ನಾತಕೋತ್ತರ ಪದವಿ ಮಾಸ್ಟರ್ ಆಫ್ ಸರ್ಜರಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ‌್ಯಾಂಕ್ ಪಡೆದಿರುವುದು ತಾಲೂಕಿಗೆ ಹೆಮ್ಮೆಯ ವಿಚಾರವಾಗಿದ್ದು, ಅವರನ್ನು ಸಹ ಅಭಿನಂದಿಸಲಾಗುತ್ತಿದೆ. ಆದ್ದರಿಂದ ಅಂತಹ ಕಾರ್ಯಕ್ರಮದಲ್ಲಿ ನಿಮ್ಮ ಸಾನ್ನಿಧ್ಯ ಅಗ ತ್ಯ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಣ ಎಂ.ಟಿ.ಅಣ್ಣೇಗೌಡ, ಜಿಪಂ ಮಾಜಿ ಸದಸ್ಯ ಎಂ.ಟಿ.ಕುಮಾರ್, ಪುರಸಭೆ ಸದಸ್ಯ ಕೆ.ಪಿ.ಪ್ರಭುಶಂಕರ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್, ಸಾಲಿಗ್ರಾಮ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ವಕ್ತಾರ ಕೆ.ಎಲ್.ರಮೇಶ್, ಜಿಲ್ಲಾ ಗ್ರಾಮಾಂತರ ಯುವ ಜೆಡಿಎಸ್ ಉಪಾಧ್ಯಕ್ಷ ಕಗ್ಗರೆ ಕುಚೇಲ, ಜೆಡಿಎಸ್ ಮುಖಂಡರಾದ ಬಾಲಾಜಿಗಣೇಶ್, ಸಾ.ರಾ.ಸ್ನೇಹ ಬಳಗದ ದೀಪು, ಚಿದಂಬರನಾಯಕ, ರಾಂಪುರ ಪ್ರಭಾಕರ್ ಇದ್ದರು.