ಜಿಲ್ಲೆ

ಗುರುಕುಲ ಪದ್ಧತಿಯ ವಸತಿ ಶಾಲೆಗೆ ಆಹ್ವಾನ

ಇಂದಿರಾ ಎನ್ ಕೆ

ಕೋಟ: ಯಕ್ಷಗಾನ ಚಿಂತಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯಗುರು ದಿವಂಗತ ಐರೋಡಿ ಸದಾನಂದ ಹೆಬ್ಬಾರ್ ಸ್ಥಾಪಿಸಿದ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರಕ್ಕೆ ಆರನೆಯ ತರಗತಿಯಿಂದ ಹತ್ತನೆಯ ತರಗತಿವರೆಗೆ ಬಾಲಕರಿಂದ ಆಹ್ವಾನಿಸಲಾಗಿದೆ. ಆಯ್ಕೆಯಾದ ಬಾಲಕರಿಗೆ ಹತ್ತಿರದ ಶಾಲೆಯಲ್ಲಿ ಶಿಕ್ಷಣ ನೀಡಲಾಗುವುದು ಜತೆಗೆ ಉಚಿತ ಊಟ, ಉಪಹಾರ, ವಸತಿ ವ್ಯವಸ್ಥೆ, ಯಕ್ಷಗಾನ ಭಾಗವತಿಗೆ, ಮದ್ದಳೆ, ಚೆಂಡೆ, ನೃತ್ಯ ಶಿಕ್ಷಣ ನೀಡಲಾಗುವುದು. ಗುರುಕುಲ ಪದ್ಧತಿಯಂತೆ ನಡೆಸಲುದ್ದೇಶಿಸುವ ಈ ಶಾಲೆಗೆ ಸೇರಲು ಬಯಸುವವರು ಮಾ.30ರೊಳಗೆ ಹೆಸರನ್ನು ನೋಂದಾಯಿಸಬೇಕು. ಆಸಕ್ತರು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ 576226, ಉಡುಪಿ ತಾಲೂಕು ಮತ್ತು ಜಿಲ್ಲೆ, ದೂರವಾಣಿ 9880605610ಯನ್ನು ಸಂಪರ್ಕಿಸಬಹುದು ಎಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.