ಜಿಲ್ಲೆ

ಮಂಡ್ಯ ಯೂತ್ ಗ್ರೂಪ್‌ನಿಂದ ದಸರ ಆಚರಣೆ: ಕಲಾತಂಡಗಳಿಗೆ ಆಹ್ವಾನ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಂಡ್ಯ ಯೂತ್ ಗ್ರೂಪ್ ವತಿಯಿಂದ ವಿಜಯದಶಮಿ ದಿನದಂದು ನಡೆಯಲಿರುವ ಮಂಡ್ಯ ದಸರಾ ಸಾಂಸ್ಕೃತಿಕ ಮಹೋತ್ಸವದಲ್ಲಿ ಭಾಗವಹಿಸಲು ಕಲಾತಂಡಗಳನ್ನು ಆಹ್ವಾನಿಸಲಾಗಿದೆ.

ದಸರಾ ಅಂಗವಾಗಿ ನಗರದ ಕಾಳಿಕಾಂಬ ದೇವಸ್ಥಾನದಿಂದ ಚಾಮುಂಡೇಶ್ವರಿ ದೇವಾಲಯದವರೆಗೆ ನಡೆಯಲಿರುವ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾತಂಡಗಳು ಮೊ.ಸಂ 9964611648 ಯನ್ನು ಸಂಪರ್ಕಿಸುವಂತೆ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.