ಜಿಲ್ಲೆ

ಸಹಾಯಧನದ ಸೀಮೆಎಣ್ಣೆ ಪಡೆಯಲು ಅರ್ಜಿ ಆಹ್ವಾನ

Mangaluru - Shravan Kumar Nala

ಮಂಗಳೂರು: ಮೀನುಗಾರಿಕೆ ನಾಡದೋಣಿಗಳು 2023-24ನೇ ಸಾಲಿಗೆ ಸಹಾಯಧನದ ಸೀಮೆಎಣ್ಣೆ ಪಡೆಯಲು ಮೀನುಗಾರಿಕೆ ಲೈಸೆನ್ಸ್ ಮತ್ತು ಸೀಮೆಎಣ್ಣೆ ರಹದಾರಿಯ ನವೀಕರಣಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ದೋಣಿ ಮಾಲೀಕರು ದಾಖಲೆೆಗಳೊಂದಿಗೆ ಸೆ.5 ರೊಳಗೆ ತಮ್ಮ ವ್ಯಾಪ್ತಿಯ ಸೀಮೆಎಣ್ಣೆ ಬಂಕ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಸೆ.11ರಂದು ದೋಣಿ ಮತ್ತು ಇಂಜಿನ್ ತಪಾಸಣೆ ಹಮ್ಮಿಕೊಳ್ಳಲಾಗಿದೆ. ದೋಣಿ ಮಾಲೀಕರು ದೋಣಿಯ ನೋಂದಣಿ ಪತ್ರದ ಪ್ರತಿ, ಆಧಾರ್ ಪ್ರತಿ ಅಥವಾ ಮತದಾರರ ಗುರುತಿನ ಚೀಟಿ ಪ್ರತಿಯೊಂದಿಗೆ ತಮ್ಮ ಹತ್ತಿರದ ನಿಗದಿತ ಸ್ಥಳದಲ್ಲಿ ದೋಣಿಯ ಇಂಜಿನ್ ತಪಾಸಣೆ ಮಾಡಿಸಿಕೊಳ್ಳಬೇಕು. ಉಳ್ಳಾಲ, ಸುಲ್ತಾನ್ ಬತ್ತೇರಿ, ತೋಟ ಬೆಂಗ್ರೆ, ಕಸಬಾಬೆಂಗರೆ, ಬಂಗ್ರಕೂಳೂರು, ಪಣಂಬೂರು, ಮೀನಕಳಿಯ, ಚಿತ್ರಾಪುರ, ಬೈಕಂಪಾಡಿ, ಕುಳಾಯಿ, ಹೊಸಬೆಟ್ಟು, ಸುರತ್ಕಲ್, ಗುಡ್ಡೆಕೊಪ್ಲ, ಸಸಿಹಿತ್ಲು, ಮತ್ತು ಮುಕ್ಕ ಸ್ಥಳದಲ್ಲಿ ತಪಾಸಣೆ ನಡೆಸಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.