ಜಿಲ್ಲೆ

ನಟ ಡಾ.ಶಿವರಾಜ್ ಕುಮಾರ್‌ಗೆ ಆಹ್ವಾನ

ರಾಜಣ್ಣ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಪಾರಂಪರಿಕ ದಸರಾ ಉತ್ಸವಕ್ಕೆ ಚಾಲನೆ ನೀಡಲು ಆಗಮಿಸುವಂತೆ ಚಲನಚಿತ್ರ ನಟ ಡಾ.ಶಿವರಾಜ್ ಕುಮಾರ್ ಅವರಿಗೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಆಹ್ವಾನ ನೀಡಿತು.


ಬೆಂಗಳೂರಿನಲ್ಲಿರುವ ನಟ ಶಿವರಾಜ್ ಕುಮಾರ್ ಅವರ ನಿವಾಸ ಶ್ರೀ ಮುತ್ತುವಿಗೆ ಸೋಮವಾರ ತೆರಳಿದ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಲ್ಲಾ ಪಂಚಾಯಿತಿ ಸಿಇಇಒ ಶೇಖ್ ತನ್ವೀರ್ ಆಸೀಫ್, ಶಾಸಕರ ಜತೆಗೂಡಿ ಆಮಂತ್ರಣ ನೀಡುವುದರೊಂದಿಗೆ ಸನ್ಮಾನಿಸಿದರು.


ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿರುವ ನಡೆಗೆ ಮಂಡ್ಯ ಜಿಲ್ಲಾಡಳಿತ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರಿಗೆ ಡಾ.ಶಿವರಾಜ್ ಕುಮಾರ್ ಧನ್ಯವಾದ ತಿಳಿಸಿದರಲ್ಲದೆ, ಇದು ಅತ್ಯಂತ ಹರ್ಷದ ಸಂಗತಿ. ಜತೆಗೆ ಸುದೈವ ಎಂದು ಸಂತಸ ಹಂಚಿಕೊಂಡರು.