ವಿಜಯಪುರ : ನಗರದ ಸಾಹಿತ್ಯ ಸಂಗಮ ವೇದಿಕೆ ವತಿಯಿಂದ ಜೂನ್ ತಿಂಗಳ ಎರಡನೇ ವಾರದಲ್ಲಿ ರಾಜ್ಯಮಟ್ಟದ ಕವಿಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನದಲ್ಲಿ ಕವಿಗೋಷ್ಠಿ, ಕವನ ಸ್ಪರ್ಧೆ, ಗ್ರಂಥಾವಲೋಕನ ಹಾಗೂ ಸಾಧಕರ ಸನ್ಮಾನ ಜರುಗಲಿದೆ. ಆಸಕ್ತರು 'ಬಸವನಬಾಗೇವಾಡಿಯ ಬಸವ ಜನ್ಮಸ್ಥಳ ಸ್ಮಾರಕದ ಐತಿಹಾಸಿಕತೆ' ಕುರಿತು ಬರೆದ ಒಂದು ಕವಿತೆ ಬರೆದು ವಾಟ್ಸಪ್ ಮೂಲಕ ಮೊ. 9449437604ಕ್ಕೆ ಕಳುಹಿಸಬಹುದಾಗಿದೆ.
'ಬಸವನಬಾಗೇವಾಡಿಯ ಬಸವ ಜನ್ಮಸ್ಮಾರಕ' ಶೀರ್ಷಿಕೆಯಡಿ ಕವನ ಸಂಕಲನ ಪ್ರಕಟಗೊಳ್ಳಲಿವೆ. ಕವಿಗಳು ತಮ್ಮ ಕವಿತೆಯ ಜತೆಗೆ ಪೂರ್ಣವಿಳಾಸ ಹಾಗೂ ಭಾವಚಿತ್ರ ಕಳುಹಿಸಬೇಕು. ಮೆಚ್ಚುಗೆ ಪಡೆದ ಕವಿತೆಗಳಿಗೆ ಪುಸ್ತಕ ಬಹುಮಾನದ ಜತೆಗೆ ಪ್ರಮಾಣ ಪತ್ರ ನೀಡಲಾಗುವುದು.
ಆಸಕ್ತರು ಮೇ 26 ರೊಳಗೆ ರಾಜಾಜಿ ನಗರದಲ್ಲಿರುವ ಸಾಹಿತ್ಯ ಸಂಗಮದ ಸಂಚಾಲಕ ಮುರುಗೇಶ ಸಂಗಮ, ಆರ್ಟಿಒ ಕಚೇರಿ ಹಿಂಭಾಗದ ನಾಡದೇವಿ ಮಂದಿರ ರಸ್ತೆಯಲ್ಲಿರುವ ವಿಳಾಸಕ್ಕೆ ಕವನ ಕಳುಹಿಸಬೇಕು . ಹೆಚ್ಚಿನ ಮಾಹಿತಿಗೆ ಮೊ. 8073625399ಕ್ಕೆ ಸಂಪರ್ಕಿಸುವಂತೆ ಪ್ರಕಟಣೆಯು ತಿಳಿಸಿದೆ.