ಜಿಲ್ಲೆ

ಶತಾಯುಷಿಗಳ ಮನೆಗೆ ತೆರಳಿ ಮತದಾನಕ್ಕೆ ಅಹ್ವಾನ

ಗೋಪಾಲಕೃಷ್ಣ ಪಾದೂರ್


ಉಡುಪಿ: ನಗರಸಭಾ ಹಾಗೂ ತಾಪಂ ವ್ಯಾಪ್ತಿಯ  ಶತಾಯುಷಿ ಮತದಾರರ ಮನೆ ಬಾಗಿಲಿಗೆ ತೆರಳಿದ ಅಧಿಕಾರಿಗಳು ವಿಧಾನಸಭಾ ಚುನಾವಣೆ ಮತದಾನದಲ್ಲಿ ಭಾಗವಹಿಸಲು ಆಹ್ವಾನ ಪತ್ರಿಕೆ ನೀಡಿದರು.
ಶತಾಯುಷಿ ಮತದಾರರಾದ ದೊಡ್ಡಣ್ಣಗುಡ್ಡೆ ಲಿಯೋನೋ ರೊಡ್ರಿಗಸ್, ನಿಟ್ಟೂರು-ಕರಂಬಳ್ಳಿ ಲಕ್ಷ್ಮೀ,  ಕೊಡವೂರು ರಾಧಾ ಹೆಗ್ಡೆ, ಒಳಕಾಡು  ರಾಮದಾಸ್ ಕಾಮತ್, ಕುತ್ಪಾಡಿ ಮೇರಿ ದಾಂತಿ ಈ ಐದು ಶತಾಯುಷಿ ಮತದಾರರನ್ನು ಆಹ್ವಾನಿಸಲಾಗಿದೆ.
 ತಾಲೂಕು ಪಂಚಾಯತಿನ  ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಉಡುಪಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷೆ ವಿಜಯಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವೀಣಾ ವಿವೇಕಾನಂದ, ತಾಪಂ ವ್ಯವಸ್ಥಾಪಕ ಸುರೇಶ್, ಸಿಬ್ಬಂದಿ ಚಂದ್ರ ನಾಯ್ಕ್ ಮೊದಲಾದವರಿದ್ದರು.