Invitation of teams to art exhibition 
ಜಿಲ್ಲೆ

ಕಲಾ ಪ್ರದರ್ಶನಕ್ಕೆ ತಂಡಗಳ ಆಹ್ವಾನ

ವಿಜಯಪುರ : ನಗರದ ಐತಿಹಾಸಿಕ ಶ್ರೀ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನ ಆವರಣ ಹಾಗೂ ಜಾನುವಾರು ಜಾತ್ರೆಯಲ್ಲಿ ಜರುಗಲಿರುವ ಸಾಂಸತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಶಹನಾಯಿ, ಭಜನೆ, ಚೌಡಕಿ ಪದ, ಗೀಗಿ ಪದ, ಬಯಲಾಟ ಹಾಗೂ ಇತರ ಜಾನಪದ ಪ್ರಕಾರಗಳ ಪ್ರದರ್ಶನ ನೀಡಲು ಕಲಾ ತಂಡಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಕಲಾ ತಂಡಗಳು ಜ. 2 ರೊಳಗೆ ಕಾರ್ಯಾಲಯದ ಮುಖ್ಯಸ್ಥ ಸುಭಾಷ ಮರನೂರ ಮೊ. 9448497761ಕ್ಕೆ ಸಂಪರ್ಕಿಸುವಂತೆ ಸಂಸ್ಥೆ ಚೇರ್ಮನ್​ ಬಸಯ್ಯ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.