The Eightfold Path of Donation and Puja Festival 
ಜಿಲ್ಲೆ

ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಗಿರೀಶ ಸಗರ

ವಿಜಯಪುರ : ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಹಿಳೆಯರಿಗಾಗಿ ಕಾಯಕ ಸ್ಪೂರ್ತಿ, ಪಾದುಕೆ ಕುಟೀರ ಯೋಜನೆ, ಮಾರುಕಟ್ಟೆ ಸಹಾಯ ಯೋಜನೆ, ಕೌಶಲ್ಯ ಉನ್ನತಿಕರಣ ಯೋಜನೆ, ಚರ್ಮ ಶಿಲ್ಪ ಯೋಜನೆ, ವಸತಿ ಯೋಜನೆ, ಕಿರು ಆರ್ಥಿಕ ನೇರ ಸಾಲ, ಸ್ವಾವಲಂಭಿ&ಸಂಚಾರಿ ಮಾರಾಟ ಮಳಿಗೆ ಯೋಜನೆಗಳಿಗಾಗಿ ಅ. 8 ರೊಳಗೆ ಸೇವಾ ಸಿಂಧು ಪೊರ್ಟಲ್​ ಮೂಲಕ ಆನಲೈನ್​ ಅರ್ಜಿ ಸಲ್ಲಿಸಬಹುದಾಗಿದೆ. ಆನ್​ಲೈನ್​ ಮೂಲಕ ಸಲ್ಲಿಸಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಜಿಲ್ಲೆಯ ಜಿಲ್ಲಾ ಸಂಯೋಜಕರು ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಕಚೇರಿಗೆ ಸಲ್ಲಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರ ಕಚೇರಿಗೆ ಭೇಟಿ ನೀಡುವಂತೆ ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಪ್ರಕಟಣೆಯಲ್ಲಿ ತಿಳಿಸಿದೆ.