ಕುಳಗೇರಿ ಕ್ರಾಸ್:ಬಾಗಲಕೋಟೆ ಜಿಲ್ಲೆಯ ರ್ಚಿಲಕೊಪ್ಪ ಪಿ.ಎಂ.ಶ್ರೀ ಜವಾಹರ ನವೋದಯ ವಿದ್ಯಾಲಯದ 11ನೇ ತರಗತಿಯ ವಿಜ್ಞಾನ ವಿಭಾಗದ ಉಳಿಕೆ ಸೀಟುಗಳನ್ನು ಭರ್ತಿ ಮಾಡಲಾಗುವುದು. ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು. ವಿಜ್ಞಾನ ವಿಭಾಗದ ಪಿಸಿಎಂಬಿಗೆ ಮಾತ್ರ ಸೀಟುಗಳಿವೆ. ಅರ್ಜಿದಾರರು ತಮ್ಮ ಅಗತ್ಯ ದಾಖಲೆಗಳನ್ನು ಶಾಲೆ ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸೆ. 23 ಕೊನೆಯ ದಿನಾಂಕ. ಹೆಚ್ಚಿನ ಮಾಹಿತಿಗಾಗಿ ವಿದ್ಯಾಲಯದ ಕಚೇರಿ ಸಂಪರ್ಕಿಸಬಹುದು.