ಕಾರ್ಕಳ: ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಕಳ ಘಟಕದ ವತಿಯಿಂದ ಡಿ.3ರಂದು ಕಾರ್ಕಳದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಕಳದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ರಂಗ ಸಂಸ್ಕೃತಿಯ ಅಧ್ಯಕ್ಷ ಎಸ್ ನಿತ್ಯಾನಂದ ಪೈ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ನುಡಿಸಿರಿ ವಿರಾಸತ್ ಘಟಕದ ಅಧ್ಯಕ್ಷ ವಿಜಯ ಶೆಟ್ಟಿ, ಪದಾಧಿಕಾರಿಗಳಾದ ಮೋಹನ ಪಡಿವಾಳ್, ಎನ್.ಪ್ರಭಾತ್ ಕುಮಾರ್, ನಿರಂಜನ್ ಜೈನ್, ಪಾರ್ಶ್ವನಾಥ ವರ್ಮ, ರಾಮಚಂದ್ರ ನೆಲ್ಲಿಕಾರ್, ರೇಷ್ಮಾ ಯು ಶೆಟ್ಡಿ, ಅವಿನಾಶ್ ಜಿ ಶೆಟ್ಟಿ, ಅಂಬರೀಶ್ ಚಿಪ್ಳೂಣ್‌ಕರ್, ಆನಂದರಾಯ ನಾಯಕ್,ಸಂತೋಷ್ ರಾವ್, ತಿಪ್ಪೇಸ್ವಾಮಿ, ಉಪಸ್ಥಿತರಿದ್ದರು, ನುಡಿಸಿರಿ -ವಿರಾಸತ್ ಘಟಕದ ಮಾಧ್ಯಮ ಪ್ರತಿನಿಧಿ ಗಣೇಶ್ ಜಾಲ್ಸೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಕೊಂಡಳ್ಳಿ ನಿರೂಪಿಸಿದರು.