ಜಿಲ್ಲೆ

ವರ್ಕ ಪ್ರಾಂ ಹೋಮ್​ ಕೆಲಸಕ್ಕೆ ಹೂಡಿಕೆ ಮಾಡುವಂತೆ ತಿಳಿಸಿ ವಂಚನೆ

ರಾಣೆಬೆನ್ನೂರ: ವರ್ಕ ಪ್ರಾಂ ಹೋಮ್​ ಕೆಲಸ ಮಾಡಲು ಹಣ ಹೂಡಿಕೆ ಮಾಡಿದರೆ ಅದರಿಂದ ಹೆಚ್ಚಿನ ಲಾಭ ಬರಲಿದೆ ಎಂದು ನಂಬಿಸಿ ಸರ್ಕಾರಿ ಅಧಿಕಾರಿಯೊಬ್ಬರಿಗೆ 2.67 ಲಕ್ಷ ರೂ. ವಂಚಿಸಿದ ಘಟನೆ ಕುರಿತು ಇಲ್ಲಿಯ ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿಯ ಮೃತ್ಯುಂಜಯ ನಗರದ ನಿವಾಸಿ ವಾಣಿಶ್ರೀ (32) ಮೋಸ ಹೋದವರು.

ಇವರು ದಾವಣಗೆರೆಯಲ್ಲಿ ಮಹಿಳಾ ಮತ್ತು ಮಕ್ಕಳ ಉಪ ನಿರ್ದೇಶಕರ ಕಚೇರಿಯಲ್ಲಿ ಕೋ ಆಡಿರ್ನೇಟರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಕರೆ ಮಾಡಿದ ಅಪರಿಚಿತರು ನೀವು ವರ್ಕ ಪ್ರಾಂ ಹೋಮ್​ ಕೆಲಸ ಮಾಡಲು ಹಣ ಹೂಡಿಕೆ ಮಾಡಿದರೆ ಅದರಿಂದ ಹೆಚ್ಚಿನ ಲಾಭ ಕೊಡಿಸುತ್ತೇವೆ ಎಂದು ನಂಬಿಸಿದ್ದಾರೆ. ಇವರು 2.67 ಲಕ್ಷ ರೂ. ಹಾಕುತ್ತಿದ್ದಂತೆ ಅವರು ಲಾಭಾಂಶ ಹಾಗೂ ಹಾಕಿದ ಹಣ ಕೂಡ ನೀಡದೆ ವಂಚಿಸಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.