ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದೇಕೆ?
ಹೊಸಪೇಟೆಯಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವ್ಯಂಗ್ಯ
ಹೊಸಪೇಟೆ: ೫೪೫ ಪಿಎಸ್ ಐ ನೇಮಕಾತಿ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ರಾಜಕೀಯ ಧ್ವೇಷವೆಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವಂತಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಲೇವಡಿ ಮಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನ ಬಿಜೆಪಿ ಆಡಳಿತದಲ್ಲಿ ೫೪೫ ಪಿಎಸ್ ಐ ನೇಮಕಾತಿ ನಡೆದಿತ್ತು. ಅದರಲ್ಲಿ ಆಗಿರುವ ಅಕ್ರಮವನ್ನು ಕಾಂಗ್ರೆಸ್ ಆರೋಪವನ್ನು ಸರಾಸಗಟಾಗಿ ತಳ್ಳಿ ಹಾಕಿತ್ತು. ಆನಂತರ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳೂ ಬಂಧನವಾಯಿತು. ೪೦-೫೦ ಜನ ಅಭ್ಯರ್ಥಿಗಳು ಎಲ್ಲ ನೇಮಕಾತಿಯಿಂದ ಅನರ್ಹಗೊಂಡಿದ್ದಾರೆ. ನೇಮಕಾತಿ ಹಗರಣವನ್ನು ಸಂಪೂರ್ಣ ಬಯಲಿಗೆಳೆಯಲು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸಿದೆ. ಬಸವರಾಜ ಬೊಮ್ಮಾಯಿ ಈ ಹಿಂದೆ ಗೃಹ ಸಚಿವರಾಗಿದ್ದಾಗ ೫೪೫ ಪಿಎಸ್‌ಐಗಳ ನೇಮಕಾತಿ ನಡೆದಿತ್ತು. ಹೀಗಾಗಿ ನ್ಯಾಯಾಂಗ ತನಿಖೆಗೆ ವಹಿಸಿರುವ ಸರ್ಕಾರದ ಕ್ರಮವನ್ನು ರಾಜಕೀಯ ದ್ವೇಷ ಎನ್ನುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದರು.
ತುಂಗಭದ್ರ ಜಲಾಶಯ, ವಿಶ್ವವಿಖ್ಯಾತ ಹಂಪಿ, ವಿಜಯನಗರಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೈಸ್ ರಸ್ತೆಗೆ ಸಂಬAಧಿಸಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಆದರೆ, ೧೯೯೭ರಲ್ಲಿ ಜೆ.ಎಚ್. ಪಾಟೀಲ್ ಅವಧಿಯಲ್ಲಿ ನಂದಿ ಇನ್ಫಾçಸ್ಟçಚ್‌ರ್ ಜೊತೆಗೆ ಫ್ರೇಮ್ ವರ್ಕ್ ಅಗ್ರಿಮೆಂಟ್ ಆಗಿದ್ದು, ಅದಕ್ಕೆ ದೇವೇಗೌಡರು, ನಾನೂ ಸಾಕ್ಷಿ. ಆನಂತರ ಒಮ್ಮೆ ಎಚ್.ಡಿ.ದೇವೇಗೌಡರು, ಎರಡು ಬಾರಿ ಎಚ್.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿ, ಎಚ್.ಡಿ.ರೇವಣ್ಣ ಪಿಡಬ್ಲೂö್ಯಡಿ ಸಚಿವರಾಗಿದ್ದರು. ನೈಸ್ ರಸ್ತೆ ಅಭಿವೃದ್ಧಿಯಲ್ಲಿ ಏನಾದರೂ ಅಕ್ರಮ ನಡೆದಿದ್ದರೆ ಯಾಕೆ ಕ್ರಮ ಜರುಗಿಸಲಿಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.