ಕಾರವಾರ: ಜಿಲ್ಲೆಯಲ್ಲಿ ಕಳೆದ ಆರುವರೆ ವರ್ಷಗಳಲ್ಲಿ ಒಟ್ಟು 4,338 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ, 46.29 ಲಕ್ಷ ರೂ. ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಅನರ್ಹ ಪಡಿತರ ಚೀಟಿದಾರರನ್ನು ಪತ್ತೆಹಚ್ಚುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಮತ್ತು ಅವರಿಗೆ ನೋಟಿಸ್ ನೀಡಿ, ದಂಡ ಆಕರಿಸಲಾಗುತ್ತದೆ. ಜಿಲ್ಲೆಯಲ್ಲಿ 2019 ರಿಂದ ಇದುವರೆಗೆ 228 ಸರ್ಕಾರಿ ನೌಕರರು ಬಿಪಿಎಲ್ ಪಡಿತರ ಚೀಟಿ ಪಡೆದಿರುವುದು ಪತ್ತೆಯಾಗಿದೆ ಎಂದು ಇಲಾಖೆ ತಿಳಿಸಿದೆ. ನಿಗಿಂತ ಹೆಚ್ಚಿನ ಆದಾಯ ಹೊಂದಿರುವ 379 ಮಂದಿಯನ್ನು, 3 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವ 97 ಮಂದಿಯನ್ನು ಆದಾಯ ತೆರಿಗೆ ಪಾವತಿಸುವ 1,170 ಮಂದಿ ಮತ್ತು ಇತರೆ 2,216 ಸೇರಿದಂತೆ 4,338 ಪಡಿತರ ಚೀಟಿದಾರರನ್ನು ಪತ್ತೆಹಚ್ಚಲಾಗಿದೆ ಎಂದು ಇಲಾಖೆ ದಾಖಲೆಗಳು ಹೇಳುತ್ತವೆ. ಪಡಿತರ ವಿತಣೆಯಲ್ಲಿ 4 ನೇ ಸ್ಥಾನ:ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯಲ್ಲಿ ನೋಂದಣಿಯಾದ ಶೇ.90.34 ರಷ್ಟು ಪಡಿತರದಾರರಿಗೆ ರೇಶನ್ ತಲುಪಿಸುವ ಮೂಲಕ ಜಿಲ್ಲೆಯು ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ. ಜಿಲ್ಲೆಯ ಒಟ್ಟು 410 ಪಡಿತರ ವಿತರಣಾ ಅಂಗಡಿಗಳಲ್ಲಿನ 3,08,351 ಪಡಿತರ ಕಾರ್ಡ್ಗಳ ಪೈಕಿ 2,78,578 ಪಡಿತರ ಚೀಟಿದಾರರು ತಮ್ಮ ಪಡಿತರವನ್ನು ಪಡೆದಿದ್ದು, ಒಟ್ಟು 53,094.55 ಕ್ವಿಂಟಾಲ್ ಪಡಿತರವನ್ನು ವಿತರಿಸಲಾಗಿದೆ ಎಂದು ಆಹಾರ ಇಲಾಖೆ ವಿವರಿಸಿದೆ.ಬಾಕಿ ಉಳಿದ ಸುಮಾರು 9.66 ರಷ್ಟು ಪಡಿತರ ಚೀಟಿದಾರರಲ್ಲಿ ಬಹುತೇಕ ಮಂದಿ ಪೋರ್ಟಬಲಿಟಿ ಮೂಲಕ ಬೇರೆ ಜಿಲ್ಲೆಯಲ್ಲಿ ಅಥವಾ ರಾಜ್ಯದಲ್ಲಿ ಪಡಿತರ ಪಡದಿರುತ್ತಾರೆ. ವಲಸೆ ಕಾರ್ಮಿಕರು ವಲಸೆ ಹೋಗುವ ಕಾರಣ ಪಡಿತರ ಪಡೆಯಲು ಸಾಧ್ಯವಾಗಿರುವುದಿಲ್ಲ ಹಾಗೂ ಕೆಲವು ಮಂದಿ ವೈಯಕ್ತಿಕ ಕಾರಣಗಳಿಂದ ಪಡಿತರ ಪಡೆದಿರುವುದಿಲ್ಲ. ಜಿಲ್ಲೆಯಲ್ಲಿನ ಒಟ್ಟು 410 ನ್ಯಾಯಬೆಲೆ ಅಂಗಡಿಗಳಲ್ಲಿ 402 ಅಂಗÀಡಿಗಳಿಗೆ ಪಾಯಿಂಟ್ ಆಫ್ ಸೇಲ್ (ಪಿಓಎಸ್) ಯಂತ್ರಗಳನ್ನು ಅಳವಡಿಸಿದ್ದು, ಇದರಿಂದಾಗಿ ಪಡಿತರ ಪಡೆದವರ ಸಂಪೂರ್ಣ ವಿವರ ಪಡೆಯಲು ಸಾಧ್ಯವಾಗಲಿದೆ ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್ ತಿಳಿಸಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ವಿಸ್ತಾರವಾದ ಜಿಲ್ಲೆಯಾಗಿದ್ದು ಗ್ರಾಮೀಣ ಜನಸಾಂದ್ರತೆಯು ಪಡಿತರ ವಿತರಣಾ ಅಂಗಡಿಗಳಿAದ ಬಹಳ ದೂರ ಇದೆ. ಹಲವೆಡೆ ನೆಟ್ವರ್ಕ್ ಸಮಸ್ಯೆ ಇದ್ದರೂ ಪಡಿತರ ವಿತರಣೆಯಲ್ಲಿ ಶೇ.90 ಕ್ಕೂ ಅಽಕ ಪ್ರಗತಿ ಸಾಽಸಿ,ರಾಜ್ಯದಲ್ಲೇ 4 ನೇ ಸ್ಥಾನ ಪಡೆದಿರುವುದು ವಿಶೇಷ. ಮಂಜುನಾಥ ರೇವಣ್‌ಕರ್ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ