ಕಬ್ಬೂರ: ಗ್ರಾಮೀಣಾಭಿವೃದ್ಧಿ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಅನೇಕ ಸೇವೆ ಒದಗಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಜಿಪಂ ಮಾಜಿ ಸದಸ್ಯ ಪವನ ಕತ್ತಿ ಹೇಳಿದರು.
ಸಮೀಪದ ಜಾಗನೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸೋಮವಾರ ಹಮ್ಮಿಕೊಂಡಿದ್ದ 69ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.
ಹಳ್ಳಿಯ ಜನರು ಪಿಕೆಪಿಎಸ್‌ಗಳ ಮೂಲಕ 158 ಸೇವೆ ಕೈಗೊಳ್ಳಬಹುದು. ಪಿಕೆಪಿಎಎಸ್‌ನಿಂದ ಶಾಲೆ, ಆಸ್ಪತ್ರೆ, ಔಷಧ ಅಂಗಡಿ, ಹಾಲಿನ ಡೇರಿ ಆರಂಭಿಸಲು ಅವಕಾಶ ನೀಡಿದೆ ಎಂದರು. ಸಿಇಒ ರವೀಂದ್ರ ಅಲಗೂರೆ ಮಾತನಾಡಿ, ಸಂಘ ಪ್ರಸಕ್ತ ವರ್ಷ 1,24 ಕೋಟಿ ರೂ. ಲಾಭ ಗಳಿಸಿದೆ. 30.19 ಕೋಟಿ ರೂ. ಠೇವು ಸಂಗ್ರಹಿಸಿ, 44.64 ಕೋಟಿ ರೂ. ಸಾಲ ವಿತರಿಸಿದೆ. 59.03 ಕೋಟಿ ರೂ.ದುಡಿಯುವ ಬಂಡವಾಳ ಹೊಂದಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ಉಪಪ್ರಧಾನ ವ್ಯವಸ್ಥಾಪಕ ಎನ್.ಜಿ.ಕಲಾವಂತ ಮಾತನಾಡಿದರು. ಸಂಘದ ಅಧ್ಯಕ್ಷ ಹನುಮಂತ ರಬಕವಿ ಅಧ್ಯಕ್ಷತೆ ವಹಿಸಿದ್ದರು. ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್ ತಾಲೂಕು ನಿಯಂತ್ರಣಾಕಾರಿ ವಿ.ಎಸ್.ಮಾಳಿಂಗೆ, ಬಿ.ಎಸ್.ಉತ್ತೂರೆ, ಉಪಾಧ್ಯಕ್ಷ ರಾಮಪ್ಪ ಪುಕಾಟೆ, ನಿರ್ದೇಶಕರಾದ ಮುತ್ತಪ್ಪ ಹಣಮನ್ನವರ, ಪರಶುರಾಮ ಕರಿಕಟ್ಟಿ, ಉದ್ದಪ್ಪ ಹಣಮನ್ನವರ, ಸಿದ್ದಪ್ಪ ಹಣಜಾನಟ್ಟಿ, ರಬಸಿದ್ದ ವಡೇರಟ್ಟಿ, ರೇವಪ್ಪ ಪೆಡ್ಡಾರೆ, ದಿಲೀಪ ಚೌಲಗೇರ, ಪರಶುರಾಮ ಹಣಮನ್ನವರ, ಗ್ರಾಪಂ ಅಧ್ಯಕ್ಷ ಮಹಾಂತೇಶ ಶಿರಗೂರ, ಶಿವರಾಯಿ ಸನದಿ, ಮಹೇಂದ್ರ ಖೇಮಲಾಪೂರೆ, ಬೀರಪ್ಪ ಡೋಣಿ ಇತರರಿದ್ದರು.