ಜಿಲ್ಲೆ

ಪಾರಂಪರಿಕ ವಸ್ತು ಮುಂದಿನ ಪೀಳಿಗೆಗೆ ಪರಿಚಯಿಸಿ

ನವಲಗುಂದ: ಪಾರಂಪರಿಕ ವಸ್ತುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ. ಭಾಸ್ಕರ ಹೇಳಿದರು.

ಪಟ್ಟಣಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು. ಹಾವೇರಿ ಜಿಲ್ಲೆ ಜನಪದರ ಬದುಕು, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪುನಶ್ಚೇತನವಾಗಿಸುವ ದೃಷ್ಟಿಯಿಂದ ಪರಂಪರೆ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಜಾನಪದ ವಿಶ್ವವಿದ್ಯಾಲಯ ಅಧಿಕಾರಿಗಳ ತಂಡ ನಗರದ ಶಿದ್ದಲಿಂಗಪ್ಪ ಜಮಖಂಡಿ ಕುಟುಂಬದಿಂದ ಹಳೆಯ ರೇಷ್ಮೆ ಸೀರೆಗಳು, ಉಪ್ಪಿನಕಾಯಿ ಭರಣಿ ಹಾಗೂ ಬಾಬಣ್ಣ ಹುರಕಡ್ಲಿ ಅವರಿಂದ ಹಳೆಯ ಎತ್ತಿನಬಂಡಿಯನ್ನು ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲು ಪಡೆದರು.

ಸಂಶೋಧನಾ ಅಧಿಕಾರಿ ಡಾ. ಹುಲಗಪ್ಪ ನಾಯ್ಕ, ಸಹಾಯಕ ಉಪನ್ಯಾಸಕ ಡಾ. ಚಂದ್ರಪ್ಪ , ಯುವರಾಜ ಕಲಾಲ, ಕಾಶಿನಾಥ ಕಲಾಲ, ಶ್ರೀಶೈಲಪ್ಪ, ಮಣಕವಾಡ ಕಾವ್ಯ ಮುದಗಲ್ಲ ಹಾಗೂ ಪಟ್ಟಣದ ಇತರರು ತಮ್ಮ ಮನೆಯಲ್ಲಿದ್ದ ಹಳೆಯ ಪಾರಂಪರಿಕ ವಸ್ತುಗಳನ್ನು ಕೊಟ್ಟರು ಉತ್ತಮ ಸ್ಪಂದನೆ ನೀಡಿದರು.