ಗಂಗಾವತಿ ಶ್ರೀಚನ್ನಬಸವ ಸ್ವಾಮಿ ಮಠದಲ್ಲಿ ಶ್ರೀ ಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿಯಿಂದ ಬೇಸಿಗೆ ನಿಮಿತ್ತ ಮಕ್ಕಳಿಗಾಗಿ ಹಮ್ಮಿಕೊಂಡ ಚಿಗುರು ಚೈತನ್ಯ ಉಚಿತ ಶಿಬಿರದ ಸಾಹಿತಿಗಳ ಪರಿಚಯ ಮತ್ತು ಸಂದರ್ಶನಲ್ಲಿ ಮಠದ ಧರ್ಮದರ್ಶಿ ಕೆ.ಚನ್ನಬಸಯ್ಯಸ್ವಾಮಿ ಸೋಮವಾರ ಮಾತನಾಡಿದರು. ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್, ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಸಿ.ಐಗೋಳ ಇತರರಿದ್ದರು. 
ಜಿಲ್ಲೆ

ಮಕ್ಕಳಿಂದ ಸಾಹಿತಿಗಳ ಸಂದರ್ಶನ

ರುದ್ರಪ್ಪ ವಾಲಿ

ಗಂಗಾವತಿ: ನಗರದ ಶ್ರೀ ಚನ್ನಬಸವ ಸ್ವಾಮಿ ಮಠದಲ್ಲಿ ಶ್ರೀ ಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿಯಿಂದ ಬೇಸಿಗೆ ನಿಮಿತ್ತ ಮಕ್ಕಳಿಗಾಗಿ ಹಮ್ಮಿಕೊಂಡ ಚಿಗುರು ಚೈತನ್ಯ ಉಚಿತ ಶಿಬಿರದಲ್ಲಿ ಸಾಹಿತಿಗಳ ಪರಿಚಯ ಮತ್ತು ಸಂದರ್ಶನ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಮಕ್ಕಳೇ ಕಾರ್ಯಕ್ರಮ ಆಯೋಜಿಸಿದ್ದು, ಹಿರಿಯ ಸಾಹಿತಿಗಳ ಪರಿಚಯದೊಂದಿಗೆ ಸಂದರ್ಶನವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಮಕ್ಕಳು ವಿಭಿನ್ನ ರೀತಿಯಲ್ಲಿ ಸಂದರ್ಶನ ನಡೆಸಿದ್ದು, ಸಾಧಕರಾದ ಹಾಸ್ಯ ಭಾಷಣಕಾರ ಬಿ.ಪ್ರಾಣೇಶ, ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಮತ್ತು ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಸಿ.ಐಗೋಳರ ಬಗ್ಗೆ ಮಕ್ಕಳು ಪರಿಚಯಾತ್ಮಕ ಭಾಷಣ ಕೈಗೊಂಡರು.

ಮಠದ ಧರ್ಮದರ್ಶಿ ಕೆ.ಚನ್ನಬಸಯ್ಯಸ್ವಾಮಿ ಮಾತನಾಡಿ, ಕ್ರೀಯಾಶೀಲ ಚಟುವಟಿಕೆಗಳ ಮೂಲಕ ಮಕ್ಕಳ ಭವಿಷ್ಯತ್ವ ರೂಪಿಸಬೇಕಿದೆ ಎಂದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಮೈಲಾರಪ್ಪ ಬೂದಿಹಾಳ್, ಎನ್.ಶಿವಪ್ರಸಾದ, ನಾಗನಗೌಡ, ನೀಲಮ್ಮ ಹಿರೇಮಠ, ವಿದ್ಯಾರ್ಥಿ ಪ್ರತಿನಿಧಿಗಳಾದ ಮಧುರಾ ಗುಡ್ಲಾನೂರ್, ಮಿಲನ್, ಸಂಜಯ್, ಸಮೀಕ್ಷಾ, ಚನ್ನಬಸವ, ಪಾಲಕರಾದ ಮಂಜುನಾಥ ಗುಡ್ಲಾನೂರ್, ಲಕ್ಷ್ಮೀದೇವಿ, ಜಗದೀಶ, ಶಿಲ್ಪಾ ಇತರರಿದ್ದರು.