ಹೈದರಾಬಾದಿನ ಐಎಸ್​ಬಿ ಸಂಸ್ಥೆಯ ಅಧಿಕಾರಿಗಳು ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಪಾನಮುಕ್ತರಾದ ನವಜೀವನ ಸಮಿತಿ ಸದಸ್ಯರ ಸಂದರ್ಶನ ನಡೆಸಿದರು. 
ಜಿಲ್ಲೆ

ನವಜೀವನ ಸಮಿತಿ ಸದಸ್ಯರ ಸಂದರ್ಶನ

ಪ್ರಮುಖ ಮುಖ್ಯಾಂಶಗಳು

  • ಬಂಟ್ವಾಳ ಕಚೇರಿಯ ಉನ್ನತಿ ಸೌಧದಲ್ಲಿ ಕಾರ್ಯಕ್ರಮ
  • ಆನಂದ್​ ಎಸ್​. ಅವರಿಂದ ಕಾರ್ಯಕ್ರಮಕ್ಕೆ ಚಾಲನೆ
ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಹೈದರಾಬಾದಿನ ಇಂಡಿಯನ್​ ಸ್ಕೂಲ್​ ಆಫ್​ ಬ್ಯುಸಿನೆಸ್​ ಸಂಸ್ಥೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ನಡೆಯುತ್ತಿರುವ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಪಾನಮುಕ್ತರಾದ ನವಜೀವನ ಸಮಿತಿ ಸದಸ್ಯರ ಸಂದರ್ಶನ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಕಚೇರಿಯ ಉನ್ನತಿ ಸೌಧದಲ್ಲಿ ಮಂಗಳವಾರ ಜರುಗಿತು.
ಐಎಸ್​ಬಿ ಸಂಶೋಧನಾ ಸಂಸ್ಥೆಯ ಸಹ ನಿರ್ದೇಶಕ ಆನಂದ್​ ಎಸ್​. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜನಜಾಗೃತಿ ವೇದಿಕೆ ರಾಜ್ಯ ಕಾರ್ಯದರ್ಶಿ ವಿವೇಕ್​ ವಿನ್ಸೆಂಟ್​ ಪಾಯಸ್​ ಮಾರ್ಗದರ್ಶನ ನೀಡಿದರು.
ಐಎಸ್​ಬಿ ಸಂಸ್ಥೆಯ ಚಂದ್ರಕಲಾ, ಸಿದ್ಧಾರ್ಥ್​, ಅರ್ಜುನ್​, ಅಖಿಲ್​, ಎಂಐಎಸ್​ ಯೋಜನಾಧಿಕಾರಿ ಪ್ರೇಮನಾಥ್​, ಕೇಂದ್ರ ಕಚೇರಿ ಯೋಜನಾಧಿಕಾರಿಗಳಾದ ನಿಖಿಲೇಶ್​ ಮಹೇಶ್​, ಜನಜಾಗೃತಿ ಮೇಲ್ವಿಚಾರಕ ನಿತೇಶ್​ ಕೆ. ಉಪಸ್ಥಿತರಿದ್ದರು.
ಶಿಬಿರದ ಮೂಲಕ ಪಾನಮುಕ್ತರಾದವರ ಕುರಿತು ಸಂಶೋಧನೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ನವಜೀವನ ಸಮಿತಿ ಸದಸ್ಯರ ಹಾಗೂ ಅವರ ಕುಟುಂಬದವರ ಸಂದರ್ಶನವನ್ನು ಐಎಸ್​ಬಿ ಸಂಸ್ಥೆ ಅಧಿಕಾರಿಗಳು ನಡೆಸಿ ಮಾಹಿತಿ ಪಡೆದರು.