ಜಿಲ್ಲೆ

ಖಾಸಗಿ ಸಂಸ್ಥೆಯಲ್ಲಿ ವಿವಿಧ ಹುದ್ದೆ ಖಾಲಿ: ಜ.24ರಂದು ನೇರ ಸಂದರ್ಶನ

ಕೆ.ಎನ್.ರಾಘವೇಂದ್ರ

ಮಂಡ್ಯ: ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜ.24ರಂದು ಉದ್ಯೋಗಕ್ಕಾಗಿ ಆಯ್ಕೆ ಮಾಡಿಕೊಳ್ಳಲು ನೇರ ಸಂದರ್ಶನ ಆಯೋಜಿಸಲಾಗಿದೆ.

ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್, ಕೃಪ ಟೆನೆಂಟ್ ಸಲ್ಯೂಷನ್, ಕಾಡ್‌ಮ್ಯಾಕ್ಸ್ ಸಲ್ಯೂಷನ್ ಎಜುಕೇಷನ್ ಟ್ರಸ್ಟ್, ಎಚ್.ಡಿ.ಎಫ್.ಸಿ ಮತ್ತು ಮುತ್ತೂಟ್ ಫೈನಾನ್ಸ್‌ನಲ್ಲಿ ಖಾಲಿ ಇರುವ ಕಸ್ಟಮರ್ ರಿಲೇಷನ್‌ಶಿಪ್ ಎಕ್ಸಿಕ್ಯೂಟಿವ್, ಎಚ್.ಆರ್ ರಿಕ್ರ್ಯೂಟರ್, ಅಪ್ರೆಂಟಿಸ್ ಟ್ರೈನಿ, ಫೈನಾನ್ಷಿಯಲ್ ಕನ್ಸಸಲ್ಟೆಂಟ್ ಇಂಟರ್ನ್ಶಿಪ್ ಟ್ರೈನಿಂಗ್ ಹುದ್ದೆಗೆ ಎಸ್‌ಎಸ್‌ಎಲ್ಸಿ, ಐ.ಟಿ.ಐ, ಯಾವುದೇ ಸ್ನಾತಕೋತ್ತರ ಪದವಿ ಉತ್ತೀರ್ಣರಾದ 18 ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಭಾಗವಹಿಸಬಹುದು. ಆಸಕ್ತರು ತಮ್ಮ ವ್ಯಾಸಂಗದ ಮೂಲ ದಾಖಲೆಯೊಂದಿಗೆ ಬೆಳಗ್ಗೆ 10.30ಕ್ಕೆ ಹಾಜರಾಗಬಹುದು. ಮಾಹಿತಿಗೆ ದೂ.ಸಂ 08232-295124 ಮತ್ತು ಮೊ.ಸಂ 9164642684, 8970646629 ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.