ಮಂಡ್ಯ: ವಿವಿಧ ಖಾಸಗಿ ಸಂಸ್ಥೆಯಲ್ಲಿ ಖಾಲಿಯಿರುವ 215 ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಏ.4ರಂದು ನಗರದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.
ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್‌ನಲ್ಲಿ 30 ಕಸ್ಟಮರ್ ರಿಲೇಷನ್‌ಷಿಪ್ ಎಕ್ಸಿಕ್ಯೂಟಿವ್ ಹುದ್ದೆ ಖಾಲಿ ಇದ್ದು, ಆಯ್ಕೆಯಾದವರಿಗೆ 14,570 ರೂ ವೇತನದ ಜತೆಗೆ ಪಿಎಫ್, ಇಎಸ್‌ಐ, ಸಿಮ್‌ಕಾರ್ಡ್ ನೀಡಲಾಗುವುದು. ಎಸ್‌ಎಸ್‌ಎಲ್‌ಸಿ ಮೇಲ್ಪಟ್ಟ 18 ರಿಂದ 28 ವರ್ಷದೊಳಗಿನವರು ಸಂದರ್ಶನದಲ್ಲಿ ಭಾಗವಹಿಸಬಹುದು.
ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್‌ನಲ್ಲಿ ಖಾಲಿಯಿರುವ 30 ರಿಲೇಷನ್‌ಷಿಪ್ ಆಫೀಸ್ಸರ್ ಹುದ್ದೆಗೆ 18 ರಿಂದ 30 ವರ್ಷದೊಳಗಿನ ಯಾವುದೇ ಪದವಿ ವ್ಯಾಸಂಗ ಮಾಡಿರುವವರನ್ನು ನೇಮಿಸಿಕೊಳ್ಳಲಾಗುತ್ತಿದೆ. ಆಯ್ಕೆಯಾದವರಿಗೆ ಮಾಸಿಕ 11 ಸಾವಿರ ರೂ ವೇತನದ ಜತೆಗೆ ಪಿಎಫ್, ಬೋನಸ್, ಇಎಸ್‌ಐ ಸೌಲಭ್ಯ ನೀಡಲಾಗುವುದು.
ಎ.ಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ 20 ಸೆಂಟರ್ ಮ್ಯಾನೇಜರ್ ಹುದ್ದೆ ಖಾಲಿ ಇವೆ. ಪಿಯುಸಿ ಮೇಲ್ಪಟ್ಟ 18ರಿಂದ 30 ವರ್ಷದೊಳಗಿನವರು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಮಾಸಿಕ 15 ಸಾವಿರ ರೂ ವೇತನದ ಜತೆಗೆ ಟಿಎ, ಇನ್ಸೆಂಟಿವ್ ಇರಲಿದೆ. ಮೆಡಿಸೇನ್ ಹೆಲ್ತ್ ಆ್ಯಂಡ್ ಲೈಫ್‌ಸ್ಟೈಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ 70 ಸಿಆರ್‌ಎಂ, ಬಿಡಿಎಂ, ಅಕೌಂಟ್, ಎಚ್‌ಆರ್ ಹಾಗೂ ಫೀಲ್ಡ್ ಎಕ್ಸಿಕ್ಯೂಟಿವ್ ಹುದ್ದೆ ಖಾಲಿ ಇವೆ. ಪಿಯುಸಿ ಮೇಲ್ಪಟ್ಟ ವಿದ್ಯಾಭ್ಯಾಸ ಹೊಂದಿರುವ 18 ರಿಂದ 35 ವರ್ಷದೊಳಗಿನವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಮಾಸಿಕ 12 ರಿಂದ 25 ಸಾವಿರ ರೂ ವೇತನದ ಜತೆಗೆ ಪಿಎಫ್, ಬೋನಸ್, ಇಎಸ್‌ಐ ಸೌಕರ್ಯವಿರಲಿದೆ.
ಪವನ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ 60 ಬಿಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯೂಟಿವ್ ಹುದ್ದೆಗೆ ಪಿಯುಸಿ ಮೇಲ್ಪಟ್ಟ 18 ರಿಂದ 35 ವರ್ಷದೊಳಗಿನವರನ್ನು ನೇಮಿಸಿಕೊಳ್ಳಲಾಗುತ್ತಿದೆ. ಮಾಸಿಕ 20 ಸಾವಿರ ರೂ ವೇತನ, ಪಿಎಫ್, ಇಎಸ್‌ಐ ಸೌಲಭ್ಯ ನೀಡಲಾಗುತ್ತಿದೆ. ಕೆ.ಎಸ್ ವರ್ಲ್ಡ್ ವೆಂಚರ್ಸ್‌ನಲ್ಲಿ 5 ವಿಷುವಲ್ ಮರ್ಚಂಡೈಸರ್ಸ್ ಹುದ್ದೆ ಖಾಲಿ ಇದೆ. ಎಂಬಿಎ(ಮಾರ್ಕೆಂಟಿಗ್) ಅಥವಾ ಯಾವುದೇ ಪದವಿ ಹೊಂದಿರುವ 18 ರಿಂದ 30 ವರ್ಷದೊಳಗಿನವರು ಸಂದರ್ಶನದಲ್ಲಿ ಭಾಗವಹಿಸಬಹುದು. 40 ಸಾವಿರ ರೂ ವೇತನದ ಜತೆಗೆ ಫ್ರೀ ವೋಲ್ವೋ ಬಸ್‌ಪಾಸ್ ನೀಡಲಾಗುತ್ತಿದೆ.
ಅರ್ಹರು ಅಂದು ಬೆಳಗ್ಗೆ 10ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು. ಮಾಹಿತಿಗೆ ದೂ.ಸಂ 08232-295124 ಅಥವಾ ಮೊ.ಸಂ 9164642684 ಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.