ಜಿಲ್ಲೆ

ಅಂತರ ಶಾಲಾ ಶಾಸ್ತ್ರೀಯ ಸಂಗೀತ ಸ್ಪರ್ಧೆ

ಪಂಕಜ ಕೆ.ಎಂ.

ಬೆಂಗಳೂರು: ಜಯನಗರದ ಒಂಬತ್ತನೇ ಬ್ಲಾಕ್‌ನಲ್ಲಿರುವ ರಾಗೀಗುಡ್ಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ವಿದ್ಯಾಕೇಂದ್ರ ಪ್ರೌಢಶಾಲೆಯು ವಿದ್ಯಾರ್ಥಿಗಳಿಗಾಗಿ ಆ. 23ರಂದು ಸರಸ್ವತಮ್ಮ ಸ್ಮಾರಕ ಅಂತರ ಶಾಲಾ ಶಾಸ್ತ್ರೀಯ ಸಂಗೀತ ಸ್ಪರ್ಧೆ ಆಯೋಜಿಸಿದೆ.

ಕಿರಿಯರ ವಿಭಾಗದಲ್ಲಿ ದೇವರ ನಾಮ, ಪ್ರೌಢಶಾಲಾ ವಿಭಾಗದಲ್ಲಿ ಕೀರ್ತನೆ ಗಾಯನ (ಕರ್ನಾಟಕ ಶೈಲಿ) ಸ್ಪರ್ಧೆ ಏರ್ಪಡಿಸಿದೆ. ಆಸಕ್ತ ಸ್ಪರ್ಧಿಗಳು ತಮ್ಮ ಹೆಸರು, ತರಗತಿ, ಶಾಲೆಯ ವಿವರಗಳೊಂದಿಗೆ ಇ-ಮೇಲ್ ragiguddavk@gmail.com  ಮುಖಾಂತರ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ವಿಳಾಸ: ರಾಗೀಗುಡ್ಡದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ವಿದ್ಯಾಕೇಂದ್ರ, ರಾಗೀಗುಡ್ಡ ಜಯನಗರ 9ನೇ ಬಡಾವಣೆ, ಬೆಂಗಳೂರು, ದೂ: 080-26587646/26594244 ಸಂಪರ್ಕಿಸಬಹುದು.