ವಿಜಯವಾಣಿ ಸುದ್ದಿಜಾಲ ದಾರವಾಡ
ಯೋಗಾಭ್ಯಾಸ ಮನುಷ್ಯನ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ಪ್ರತಿಯೊಬ್ಬರೂ ಯೋಗದೊಂದಿಗೆ ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಪೀಠದ ಅಧ್ಯಕ್ಷ ಡಾ. ಸುಭಾಷಚಂದ್ರ ನಾಟಿಕರ ಹೇಳಿದರು.
ನಗರದ ಯಾಲಕ್ಕಿ ಶೆಟ್ಟರ ಕಾಲನಿಯ ಶ್ರೀ ಶಂಕರ ಮಠದಲ್ಲಿ ಸಾಫಲ್ಯ ಯೋಗ ಸಂಸ್ಕೃತಿ ಬಳಗದಿಂದ ಶನಿವಾರ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಫಲ್ಯ ಪ್ರತಿಷ್ಠಾನ ಸಂಸ್ಕೃತಿ ಶಿಕ್ಷಣ ಶಿಶು ಮಂದಿರದ ಸಂಸ್ಥಾಪಕ ಸಂಚಾಲಕಿ ಮೃಣಾಲ್ ಅರುಣ ಜೋಷಿ ಮಾತನಾಡಿ, ಯೋಗ ಭಾರತ ಪುರಾತನ ಪದ್ಧತಿ. ಪ್ರಧಾನಿ ನರೇಂದ್ರ ಮೋದಿಯವರು ಇಡೀ ವಿಶ್ವಕ್ಕೆ ಪರಿಚಯಿಸಿದ್ದು ಶ್ಲಾಘನೀಯ ಎಂದರು.
ಯೋಗ ಗುರು ಭಾರತಿ ಹೂಗಾರ, ಶಂಕರ ಮಠದ ಅಧ್ಯಕ್ಷ ವಿಠ್ಠಲ ಶೆಟ್ಟಿ, ಅಶೋಕ ಕುಲಕರ್ಣಿ, ಅಶೋಕ ಮುಗದೊಣ್ಣವರ, ಕರಿಯಪ್ಪ ಸುಣಗಾರ, ಸುಮನ ಕೆಲಗೇರಿ, ದೀಪಾ ಅಂಗಡಿ, ಲಲಿತಾ ಉಡುಪಿ, ಇತರರಿದ್ದರು.
ವೀರೇಶ ಕೆಲಗೇರಿ ನಿರೂಪಿಸಿದರು. ಪೂರ್ಣಿಮಾ ತಿವಾರಿ ವಂದಿಸಿದರು.