ಧಾರವಾಡ: ಮಕ್ಕಳ ಆರೋಗ್ಯ, ಸದೃಢತೆ, ಮಾನಸಿಕ ಬೆಳವಣಿಗೆಗೆ ಯೋಗ ಸಹಕಾರಿ. ಮಕ್ಕಳಿಗೆ ನಿರಂತರವಾಗಿ ಯೋಗ ಕಲಿಸಲು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಶೇ. 20ರಷ್ಟು ಅನುದಾನ ಮೀಸಲು ಇಡಲಾಗುವುದು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ನಗರದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಽಕಾರಿ ದಿವ್ಯ ಪ್ರಭು ಮಾತನಾಡಿ, ಯೋಗದಿಂದ ದೈಹಿಕ ಮತ್ತು ಮÁನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಯೋಗದ ಮಹತ್ವ ಇಂದು ವಿಶ್ವಕ್ಕೆ ಪಸರಿಸಿದೆ. ವಿಶ್ವದ ಅನೇಕ ರಾಷ್ಟçಗಳು ಯೋಗವನ್ನು ಅಳವಡಿಸಿಕೊಂಡು ಪ್ರಾಧಾನ್ಯತೆ ನೀಡಿವೆ. ಅನೇಕ ರೋಗಗಳಿಗೆ ಪರಿಹಾರವಾಗಿರುವ ಯೋಗವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕ ಎಂದರು.
ಜಿಲ್ಲಾ ಪೊಲೀಸ್ ಅಽÃಕ್ಷಕ ಡಾ. ಗೋಪಾಲ ಬ್ಯಾಕೋಡ, ಹೆಚ್ಚುವರಿ ಪೊಲೀಸ್ ಅಽÃಕ್ಷಕ ನಾರಾಯಣ ಬರಮನಿ, ಜಿಲ್ಲಾ ಆರೋಗ್ಯಾಽಕಾರಿ ಡಾ. ಶಶಿ ಪಾಟೀಲ, ಶಾಲಾ ಶಿಕ್ಷಣ, ಆಯುಷ್, ಆರೋಗ್ಯ, ಕ್ರೀಡಾ, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು.
ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಯೋಗ ಸಂಸ್ಥೆಗಳ ಸದಸ್ಯರು, ಯೋಗಪಟುಗಳು ಯೋಗ ಪ್ರದರ್ಶನ ನೀಡಿದರು. ಯೋಗ ತರಬೇತುದಾರ ಜಗದೀಶ ಮಳಗಿ ಯೋಗ ಪ್ರದರ್ಶನ ನಡೆಸಿಕೊಟ್ಟರು.