ಜಿಲ್ಲೆ

ನಾಲ್ಕು ಗೋಡೆಗಳಿಂದ ಹೆಣ್ಣು ಹೊರಬರಲಿ

ವಿಜಯಪುರ: ಮಹಿಳೆ ಕುಟುಂಬದ ಕೇಂದ್ರ ಬಿಂದು. ಅವಳ ಶಿಕ್ಷಣ ಉಳಿದೆಲ್ಲರ ಶಿಕ್ಷಣಕ್ಕೆ ತಳಪಾಯ. ಅವಳು ಮನೆಯ ನಾಲ್ಕು ಗೋಡೆಗಳ ಮಧ್ಯ ಕುಳಿತರೆ ಸಾಲದು, ಹೊರ ಬರಬೇಕು ಎಂದು ಸಂತ ಜೋಸ್ೆ ಶಾಲೆ ಮುಖ್ಯೋಪಾಧ್ಯಾಪಕಿ ಅನಲಿಸಾ ಬಾಸ್ಕೊ ಹೇಳಿದರು.
ನಗರದ ಕುಮುದಬೇನ್ ದರಬಾರ್ ವಾಣಿಜ್ಯ, ವಿಜ್ಞಾನ ಹಾಗೂ ವ್ಯವಹಾರ ಅಧ್ಯಯನ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಕಮಹಾದೇವಿ ಮಹಿಳಾ ವಿವಿಯ ಅರ್ಥಶಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಭಕ್ತಿ ಮಹೀಂದ್ರಕರ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರ ವಿಷಯ ಕುರಿತು ಮಾತನಾಡಿದರು.
ದ್ವಾರಕಾದಾಸ ವಿಠಲದಾಸ ದರಬಾರ್ ಮೆಮೋರಿಯಲ್ ಟ್ರಸ್ಟಿನ ಚೇರ್ಮನ್ ರಾಧಾ ದರಬಾರ್ ಅಧ್ಯಕ್ಷತೆ ವಹಿಸಿದ್ದರು.
ವಿವಿ ಸಂಘದ ಅಧ್ಯಕ್ಷ ರಾಜೇಶ ದರಬಾರ್, ಪ್ರಾಂಶುಪಾಲ ವಿನಾಯಕ ಗ್ರಾಮಪುರೋಹಿತ, ಉಪನ್ಯಾಸಕಿಯರಾದ ಸುಚಿತ್ರಾ ಮಹಾಜನ್, ರಾಜೇಶ್ವರಿ ಪಾಠಕ, ದುರ್ಗಾಲಕ್ಷ್ಮಿ ಆಚಾರ್ಯ, ಉಪನ್ಯಾಸಕರಾದ ಅರುಣಕುಮಾರ, ರಘೂತ್ತಮ ಅರ್ಜುಣಗಿ, ವಿನೋದ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶ್ರೀಶಾ ಕುಲಕರ್ಣಿ, ಐಶ್ವರ್ಯ ಮಂಗಸೂಳಿ ಹಾಗೂ ಪೂಜಾ ಹಡಪದ ಸ್ವಾಗತಿಸಿದರು. ವೈಷ್ಣವಿ ಕುಲಕರ್ಣಿ ಹಾಗೂ ವಿಜಯಶ್ರೀ ಜೋಶಿ ನಿರೂಪಿಸಿದರು. ದಿವ್ಯಾ ಹಳ್ಳಿ ವಂದಿಸಿದರು.
ರುಡ್‌ಸೆಟ್ ಸಂಸ್ಥೆ: ಸಂಘದ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಭಾನುವಾರ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ಆರ್. ಆಲಗೂರ ಕಾರ್ಯಕ್ರಮ ಉದ್ಘಾಟಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಕೆ.ಕೆ. ಚವಾಣ್ ಅಧ್ಯಕ್ಷತೆ ವಹಿಸಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನೀಲ ಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಕೆ. ಸುನಂದಾ ಅವರು ಸಾಧನೆ ಮಾಡಿದ ಮಹಿಳೆಯರ ಕುರಿತು ಮಾತನಾಡಿದರು.
ಕಾಶಿಬಾಯಿ ಕ್ಯಾಡಗಿ, ರುಡ್‌ಸೆಟ್ ಸಂಸ್ಥೆ ನಿರ್ದೇಶಕ ಆರ್.ಡಿ. ಜೈನಾಪುರ, ಜಿಲ್ಲಾ ಸಂಯೋಜಕಿ ಭಾರತಿ ಹೊನ್ನಳ್ಳಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು.