ಜಿಲ್ಲೆ

ಸಮಾನತೆ ಸಾಧಿಸುವುದರಲ್ಲಿ ಮಹಿಳೆ ಯಶಸ್ವಿ: ತರಬೇತಿ ಸಂಸ್ಥೆ ನಿರ್ದೇಶಕ ಪ್ರಸನ್ನಕುಮಾರ್ ಮೆಚ್ಚುಗೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪ್ರತಿ ಕ್ಷೇತ್ರದಲ್ಲೂ ಸಾಧನೆ ಮಾಡುವ ಮೂಲಕ ಮಹಿಳೆಯರು ತಮ್ಮ ಛಾಪು ಮೂಡಿಸಿದ್ದಾರೆ ಎಂದು ಬ್ಯಾಂಕ್ ಆಫ್ ಬರೋಡ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಪ್ರಸನ್ನಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ತರಬೇತಿ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಹಿಳೆಯರು ಸಮಾನತೆಯ ಹಾದಿಯನ್ನು ಸಾಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಅಂತಹ ಹೆಣ್ಣು ಮಕ್ಕಳ ಸಾಧನೆಗೆ ಹೃದಯಪೂರ್ವಕ ಅಭಿನಂದನೆ. ಕಳೆದ 25 ವರ್ಷದಿಂದ ಗ್ರಾಮೀಣ ಭಾಗದ ಯುವ ಜನತೆಯ ಅಭಿವೃದ್ಧಿಗಾಗಿ ಅವಿರತ ಶ್ರಮಿಸಲಾಗುತ್ತಿದೆ. ಸ್ವಾವಲಂಬಿಗಳಾಗಿ ಸ್ವಾಭಿಮಾನದ ಬದುಕು ಸಾಗಿಸಿ ಎಂಬ ವಾಕ್ಯದೊಂದಿಗೆ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.

ಸಂಸ್ಥೆಯ ಉಪನ್ಯಾಸಕಿ ಸುಶ್ಮಿತಾ, ಕಚೇರಿ ಸಹಾಯಕಿ ಮಮತಾ, ತರಬೇತಿದಾರರಾದ ರಶ್ಮಿ ರಾಘವೇಂದ್ರ, ಭಾನು ಇತರರಿದ್ದರು. ಇದೇ ವೇಳೆ ಸಂಸ್ಥೆಯಲ್ಲಿ ತರಬೇತಿ ಪಡೆದು ಉದ್ಯಮಿಗಳಾಗಿ ಯಶಸ್ವಿಯಾದ ಪುಟ್ಟಮ್ಮ(ರೈತ ಮಹಿಳೆ), ರಂಜಿತಾ(ಬ್ಯೂಟಿ ಪಾರ್ಲರ್), ಧೃತಿ(ಬೋಟಿಕ್ ಉದ್ಯಮಿ), ಅನ್ನಪೂರ್ಣ(ಕೃತಕ ಆಭರಣ ತಯಾರಿಕೆ) ಅವರನ್ನು ಸನ್ಮಾನಿಸಲಾಯಿತು.