ವಿಜಯವಾಣಿ ಸುದ್ದಿಜಾಲ ಧಾರವಾಡ ಸೌರಶಕ್ತಿಯಂಥ ಪರಿಸರ ಸ್ನೇಹಿ ಇಂಧನವನ್ನು ಬಳಸಿಕೊಂಡು, ಕೆವಿಜಿಬಿ, ಇತರ ಸ್ಥಳೀಯ ಹಣಕಾಸು ಸಂಸ್ಥೆಗಳ ಬೆಂಬಲದೊAದಿಗೆ ಮಹಿಳೆಯರು ಉದ್ಯಮಗಳನ್ನು ಕಟ್ಟುವ ಮೂಲಕ ಸ್ವಾವಲಂಬಿಗಳಾಗಬೇಕು ಎಂದು ಕ್ರೆಡಲ್‌ನ ಎಜಿಎಂ ಸವಿತಾ ಎಸ್. ಮೇಟಿ ಹೇಳಿದರು. ಇಲ್ಲಿನ ಗಾಂಽನಗರದ ಸೆಲ್ಕೋ ಇಂಡಿಯಾದ ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅತಿಥಿಯಾಗಿ ಪಾಲ್ಗೊಂಡಿದ್ದ ಕೆವಿಜಿಬಿಯ ಐಟಿ ವಿಭಾಗದ ಚೀಫ್ ಮ್ಯಾನೇಜರ್ ಕೆ.ಎಸ್. ಅನುರಾಧಾ ಮಾತನಾಡಿ, ಹೆಣ್ಣು ಮಕ್ಕಳ ಜೀವನದಲ್ಲಿ ಶಿಕ್ಷಣ ಮುಖ್ಯವಾಗಿದೆ. ಅದು ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಆಯ್ಕೆಗಳನ್ನು ಮಾಡಿಕೊಳ್ಳುವ ಧೈರ್ಯ ನೀಡುತ್ತದೆ ಎಂದರು.
ಸೆಲ್ಕೋದ ಡೆಪ್ಯೂಟಿ ಜನರಲ್ ಮ್ಯಾನೇಜರ್ ಪ್ರಸನ್ನ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತೆ ಕೃಷ್ಣಿ ಶಿರೂರ, ಸೆಲ್ಕೋ ಸಿಬ್ಬಂದಿ, ಔದ್ಯೋಗಿಕ ಸಹವರ್ತಿಗಳು, ಮಹಿಳಾ ಉದ್ಯಮಿಗಳು, ವಿವಿಧ ಮಹಿಳಾ ಸಂಘ ಸಂಸ್ಥೆಗಳ ಪ್ರತಿನಿಽಗಳು ಉಪಸ್ಥಿತರಿದ್ದರು.ಸೆಲ್ಕೋ ಶಾಖಾ ವ್ಯವಸ್ಥಾಪಕಿ ಶೋಭಾ ಸಾಲಿಮಠ ಸ್ವಾಗತಿಸಿದರು. ಚಂದ್ರಕಲಾ ವಂದಿಸಿದರು.