ಸಾಂಸ್ಕೃತಿಕ ವಿನಿಮಯವನ್ನು ಬೆಳೆಸುವಲ್ಲಿ, ವೈವಿಧ್ಯಮಯ ಸಂಸ್ಕೃತಿಗಳನ್ನು ಶ್ರೀಮಂತಗೊಳಿಸುವಲ್ಲಿ ಮತ್ತು ಜಾಗತಿಕ ಸಹಕಾರ ಮತ್ತು ಶಾಂತಿಗಾಗಿ ಪರಸ್ಪರ ತಿಳುವಳಿಕೆಯನ್ನು ಪೋಷಿಸುವಲ್ಲಿ ವಸ್ತುಸಂಗ್ರಹಾಲಯಗಳು ವಹಿಸುವ ಪ್ರಮುಖ ಪಾತ್ರವನ್ನು ತಿಳಿಸಿ ಹೇಳಲು ವಿಶ್ವವು 2024 ರ ಮೇ 18 ರಂದು ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು ಆಚರಿಸುತ್ತಿದೆ.
ಸಂಗ್ರಹಾಲಯದ ಮೇಲ್ವಿಚಾರಕರುಗಳು ಈ ಸಾಂಸ್ಕೃತಿಕ ಅಂಶಗಳಿಗೆ ಆದ್ಯತೆ ನೀಡಲು ಮತ್ತು ಶ್ರೀಮಂತ ಪರಂಪರೆಯನ್ನು ಪ್ರತಿನಿಧಿಸುವ ಅಮೂಲ್ಯವಾದ ಕಲಾಕೃತಿಗಳನ್ನು ಸಂರಕ್ಷಿಸುವಲ್ಲಿ ಜನರಲ್ಲಿ ಜವಾಬ್ದಾರಿಯನ್ನು ಹೆಚ್ಚಿಸುವಂತೆ ಕರೆ ನೀಡಲಾಗಿದೆ. ನಮ್ಮ ಪ್ರದೇಶದಲ್ಲಿ ರೈಲ್ವೆ ವ್ಯವಸ್ಥೆಯ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಮುಂಚಿನ ದಾರ್ಶನಿಕರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವುದು ಬಹು ಮುಖ್ಯವಾಗಿದೆ.
ಈ ಮಹತ್ವದ ದಿನದ ಸ್ಮರಣಾರ್ಥವಾಗಿ, ಮೈಸೂರು ರೈಲು ವಸ್ತುಸಂಗ್ರಹಾಲಯವು ಅನಾಥಾಶ್ರಮಗಳು, ವಿಕಲಚೇತನರ ಶಾಲೆಗಳು ಮತ್ತು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ದಿನಾಂಕ 18-05.-024 ರಂದು 10:00 ಗಂಟೆ ಮತ್ತು 17:30 ಗಂಟೆಗ ನಡುವೆ ಉಚಿತ ಪ್ರವೇಶವನ್ನು ನೀಡುವ ಮೂಲಕ ಹೃತ್ಪೂರ್ವಕ ಆಹ್ವಾನವನ್ನು ನೀಡುತ್ತದೆ.