ಕನಕಗಿರಿಯ ವೆಂಕಟಪತಿ ಬಾವಿಯಲ್ಲಿ ‘ಶ್ರೀ ವಿಜಯದಾಸರು’ ಸಿನಿಮಾ ಚಿತ್ರೀಕರಣ ನಡೆಯಿತು. ಕಲಾವಿದರಾದ ಪುರುಷೋತ್ತಮ ರೆಡ್ಡಿ, ಶರತ್‌ಕುಮಾರ ದಂಡಿನ್ ನಟ ಮತ್ತು ನಿರ್ಮಾಪಕ ತ್ರಿವಿಕ್ರಮ ಜೋಷಿ, ಪದ್ಮ ಕಲಾ ಇತರರಿದ್ದರು. 
ಜಿಲ್ಲೆ

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಶ್ರೀ ಜಗನ್ನಾಥ ದಾಸರು ಸಿನಿಮಾ ಆಯ್ಕೆ: ಬೆಂಗಳೂರಿನಲ್ಲಿ ಮಾ.3ರಿಂದ 10ರವರೆಗೆ ಪ್ರದರ್ಶನ

ಕನಕಗಿರಿ: ಪಟ್ಟಣ ಸೇರಿದಂತೆ ಸುತ್ತಲಿನ ಐತಿಹಾಸಿಕ ತಾಣಗಳಲ್ಲಿ ಚಿತ್ರೀಕರಣಗೊಂಡು ರಾಜ್ಯ ಮತ್ತು ವಿದೇಶದಲ್ಲಿ ಪ್ರದರ್ಶನಗೊಂಡ ‘ಶ್ರೀ ಜಗನ್ನಾಥ ದಾಸರು’ ಸಿನಿಮಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ ಎಂದು ಚಿತ್ರದ ನಿರ್ದೇಶಕ ಮಧುಸೂದನ್ ಹವಾಲ್ದಾರ್ ತಿಳಿಸಿದರು.

ಪಟ್ಟಣದಲ್ಲಿ ‘ಶ್ರೀ ವಿಜಯದಾಸರು’ ಚಲನಚಿತ್ರದ ಶೂಟಿಂಗ್ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ 14 ಚಿತ್ರಗಳಲ್ಲಿ ಶ್ರೀ ಜಗನ್ನಾಥ ದಾಸರು ಒಂದಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯ್ಕೆ ಮಾಡಿದ್ದು, ಬೆಂಗಳೂರಿನಲ್ಲಿ ಮಾ.3ರಿಂದ 10ರವರೆಗೆ ನಡೆಯಲಿರುವ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಕನಕಗಿರಿ ಮತ್ತು ಗಂಗಾವತಿಯ ಜನತೆ, ಹಲವು ಜನಪ್ರತಿನಿಧಿಗಳು ಸಹಕಾರ ನೀಡಿದ್ದೇ ‘ಶ್ರೀ ಜಗನ್ನಾಥ ಚಲನಚಿತ್ರ’ ಯಶಸ್ಸಿಗೆ ಕಾರಣ ಎಂದರು.

ಸ್ಥಳೀಯ ಕಲಾವಿದರಾದ ಪುರುಷೋತ್ತಮ ರೆಡ್ಡಿ, ಶರತ್‌ಕುಮಾರ ದಂಡಿನ್, ನಟ ಮತ್ತು ನಿರ್ಮಾಪಕ ತ್ರಿವಿಕ್ರಮ ಜೋಷಿ, ಪದ್ಮ ಕಲಾ, ಕೀರ್ತಿ ಸೋನಿ, ಅಶೋಕ ಸಜ್ಜನ್, ಕರಿಬಸಪ್ಪ, ನಾರಾಯಣ ರೆಡ್ಡಿ, ರಾಘವೇಂದ್ರ ಶಿರವಾಳ ಇದ್ದರು.