ಬೆಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸೆ. 15ರಂದು ಬೆಳಗ್ಗೆ 9.15ಕ್ಕೆ ನಗರದ ಟೌನ್‌ಹಾಲ್ ಬಳಿ ಸಂವಿಧಾನ ಪ್ರಸ್ತಾವನೆ ವಾಚನ ಮಾಡಲಾಗುವುದು.
ಇದಕ್ಕೂ ಮುನ್ನ ಬೆಂಗಳೂರು ಉತ್ತರ ತಾಲೂಕು ಹಲಸೂರಿನಿಂದ ಮಹಾತ್ಮ ಗಾಂಧಿ ರಸ್ತೆ, ವಿಧಾನ ಸೌಧ ಮಾರ್ಗವಾಗಿ ಟೌನ್‌ಹಾಲ್ ತಲುಪಿ ಬೃಹತ್ ಮಾನವ ಸರಪಳಿ ನಿರ್ಮಾಣ ಮಾಡಲಾಗುವುದು. ಇದರಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಬೆಂ. ಉತ್ತರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ತಿಳಿಸಿದ್ದಾರೆ.