ಜಿಲ್ಲೆ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ; ಪತಂಜಲಿಯಿ೦ದ ಜಾಗೃತಿ ಜಾಥಾ

ಧಾರವಾಡ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಗರದ ಲಿಂಗರಾಜ ಟೌನ್ ಹಾಲ್ ಆವರಣದಲ್ಲಿ ಪತಂಜಲಿ ಯೋಗ ಸಮಿತಿಯಿಂದ ರಾಜ್ಯ ಪ್ರಭಾರಿ, ಅಂತಾರಾಷ್ಟ್ರೀಯ ಯೋಗಗುರು ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ಗುರುವಾರ ಜಾಗೃತಿ ಜಾಥಾ ನಡೆಸಲಾಯಿತು.
ಟೌನ್ ಹಾಲ್‌ನಿಂದ ಹೊರಟ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಯೋಗ ಮತ್ತು ಆರೋಗ್ಯದ ಜನಜಾಗೃತಿ ಘೋಷಣೆ ಕೂಗುತ್ತ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಭವರಲಾಲ್ ಆರ್ಯ ಮಾತನಾಡಿ, ಜೂ. 21ರಂದು ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಏಕಕಾಲಕ್ಕೆ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಜೃಂಭಣೆಯಿAದ ಆಚರಿಸಲಾಗುವುದು. ಬಾಬಾ ರಾಮದೇವ ಅವರು ಹರಿದ್ವಾರದ ಪತಂಜಲಿ ಯೋಗ ಪೀಠದಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಜಾತಿ, ಧರ್ಮ, ಮತ- ಪಂಥ ಭೇದವಿಲ್ಲದೆ ಭಾರತೀಯರೆಲ್ಲರನ್ನು ಒಂದುಗೂಡಿಸುವ ಹಬ್ಬ ಇದು. `ಯೋಗ ಮಹೋತ್ಸವ'ದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಯೋಗಾಭ್ಯಾಸ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸೀಮಿತವಾಗಬಾರದು ಎಂದರು.
ನಿತ್ಯ ಒಂದು ಗಂಟೆ ಯೋಗಾಸನ, ಪ್ರಾಣಾಯಾಮ, ಧ್ಯಾನ ಮಾಡಿದರೆ ದೀರ್ಘಕಾಲ ಆರೋಗ್ಯದಿಂದ ಇರಲು ಸಾಧ್ಯ. 2025ರ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆವರೆಗೆ ರಾಜ್ಯಾದ್ಯಂತ ಯೋಗ ಶಿಕ್ಷಕರ ತರಬೇತಿ ಶಿಬಿರ, ಅಗ್ನಿಹೋತ್ರ ತರಬೇತಿ, ಸಂಸ್ಕೃತ ಕಲಿಕಾ ಶಿಬಿರ, ಬಾಲಸಂಸ್ಕಾರ ಶಿಬಿರಗಳನ್ನು ನಡೆಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದರು.
ಜಾಥಾದಲ್ಲಿ ರಮೇಶ ಸುಲಾಕೆ, ಎಂ.ಡಿ. ಪಾಟೀಲ, ಶೈಲಜಾ ಮಾಡಿಕರ, ಉಮಾ ಅಗಡಿ, ಹಬೀಬ್, ನಾಗರತ್ನಾ ಸುಲಾಕೆ, ತನುಜಾ ಪಾಟೀಲ, ರಾಜೇಶ್ವರಿ ಹಡಗಲಿ, ಸೌಮ್ಯ ಮಲ್ಲಾಪುರ, ಬಾಲರಾಜ್ ಸಿಂಗ್, ಪ್ರಕಾಶ ಪವಾಡಶೆಟ್ಟಿ, ಬಸವರಾಜï ಮಮ್ಮಿಗಟ್ಟಿ, ಸವಿತಾ ಶಿಂಧೆ, ಇತರರು ಪಾಲ್ಗೊಂಡಿದ್ದರು.