ಅಕ್ತರ್  
ಜಿಲ್ಲೆ

ಅಕ್ತರ್‌ಗೆ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

ಕುಶಾಲನಗರ: ಕುಶಾಲನಗರದ ಎ ಕ್ರಿಯೇಟಿವ್ ಡಾನ್ಸ್ ಅಕಾಡೆಮಿ ನೃತ್ಯ ತರಬೇತಿ ಕೇಂದ್ರದ ಸಂಯೋಜಕ ಅಕ್ತರ್ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ದೆಹಲಿಯ ವೋಲ್ಡ್ ವೈಡ್ ಇವೆಂಟ್ ವತಿಯಿಂದ ದೆಹಲಿಯಲ್ಲಿ ಆಯೋಜಿಸಿದ್ದ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಕಾರ್ಯಕ್ರಮದಲ್ಲಿ ಅಕ್ತರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 500 ಕ್ಕೂ ಅಧಿಕ ನೃತ್ಯ ಪಟುಗಳು ಭಾಗವಹಿಸಿದ್ದು, ಅತ್ಯುತ್ತಮ ಸಾಧನೆ ಮಾಡಿದ ನೃತ್ಯ ಪಟುಗಳು ಪ್ರಶಸ್ತಿ ಸ್ವೀಕರಿಸಿದರು.

ನೃತ್ಯ ಸಂಯೋಜಕ ಅಕ್ತರ್ ಮೂರು ವರ್ಷಗಳಿಂದ 1ಸಾವಿರಕ್ಕೂ ಅಧಿಕ ಮಕ್ಕಳಿಗೆ ನೃತ್ಯ ತರಬೇತಿ ನೀಡಿದ್ದು, ಹಲವು ಮಕ್ಕಳು ಜಿಲ್ಲೆ ಹಾಗೂ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.