ಜಿಲ್ಲೆ

ನ.6ರಿಂದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಅಗರಬತ್ತಿ ಎಕ್ಸ್‌ಪೋ; ಎಐಎಎಂಎ ಆಯೋಜನೆ

ಬೆಂಗಳೂರು: ಮುಂಬರುವ ನ.6 ರಿಂದ ಮೂರುದಿನಗಳ ಕಾಲ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಅಗರಬತ್ತಿ ಎಕ್ಸ್‌ಪೋ ಏರ್ಪಡಿಸಲಾಗಿದೆ. ಅಖಿಲ ಭಾರತ ಅಗರಬತ್ತಿ ತಯಾರಕರ ಸಂಘವು (ಎಐಎಎಂಎ) ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಎಎಂಎ ಎಕ್ಸ್‌ಪೋ ಅಧ್ಯಕ್ಷ ಅರ್ಜುನ್ ರಂಗಾ, ಅಗರಬತ್ತಿ ಭಾರತದ ಸಂಸ್ಕೃತಿಯ ಭಾಗ. ವರ್ಷಕ್ಕೆ ಸುಮಾರು 8 ಸಾವಿರ ಕೋಟಿ ರೂಪಾಯಿಗಳ ವಹಿವಾಟು ಈ ಉದ್ಯಮದಿಂದ ನಡೆಯುತ್ತದೆ. ಒಂದು ಸಾವಿರ ಕೋಟಿ ರೂಪಾಯಿ ವಿದೇಶಗಳಿಗೆ ರಫ್ತಾಗುತ್ತದೆ. ಇಂತಹ ಅಗರಬತ್ತಿಯ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಭಾರತವನ್ನು ಜಾಗತಿಕ ಅಗರಬತ್ತಿ ಕೇಂದ್ರವನ್ನಾಗಿ ರೂಪಿಸಲು ದೇಶದ ಅತಿದೊಡ್ಡ ಎಕ್ಸ್‌ಪೋ ಆಯೋಜಿಸಲಾಗಿದೆ. ಪಾರಂಪರಿಕತೆಯೊಂದಿಗೆ ಆಧುನಿಕತೆ ಎಂಬ ಧ್ಯೇಯವನ್ನಿರಿಸಿಕೊಂಡು ಆಯೋಜಿಸಿರುವ ಎಐಎಎಂಎ ಎಕ್ಸ್‌ಪೋ-2025 ಸಮ್ಮೇಳನದಲ್ಲಿ ಅಗರಬತ್ತಿ ಉದ್ಯಮದ ಬಗ್ಗೆ ವಿಶೇಷ ಮಾಹಿತಿಯನ್ನು ನೀಡುವ ಉದ್ದೇಶದಿಂದ ವಿವಿಧ ಸೆಮಿನಾರ್‌ಗಳು, ಸಂವಾದಗಳು ನಡೆಯಲಿವೆ. ಅಗರಬತ್ತಿ ಉದ್ಯಮಕ್ಕೆ ಬೇಕಾದ ಕಚ್ಚಾ ವಸ್ತುಗಳು, ಸುಗಂಧ ದ್ರವ್ಯಗಳು, ಈ ಕುರಿತು ಆಗಿರುವ ಸಂಶೋಧನೆ, ಪ್ಯಾಕೇಜಿಂಗ್, ಉದ್ಯಮದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೊಡಗಿಸಿಕೊಂಡಿರುವ ಮಹಿಳೆಯರ ಸಬಲೀಕರಣ, ಮಾರುಕಟ್ಟೆ ವಿಧಾನ ಇತ್ಯಾದಿ ಅಂಶಗಳ ಕುರಿತು ಈ ಕ್ಷೇತ್ರದ ತಜ್ಞರು ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಐಎಎಂಎ ಅಧ್ಯಕ್ಷ ಅಂಬಿಕಾ ರಾಮಂಜನೇಯುಲು, ಮಾಜಿ ಅಧ್ಯಕ್ಷರಾದ ಸಪ್ತಗಿರಿ ಎಸ್.ಬೊಗ್ಗರಾಮ್, ಪಿ.ಎಸ್.ಶರತ್ ಬಾಬು, ಟಿ.ವಿ.ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ದೇಶ-ವಿದೇಶಗಳ ಪ್ರತಿನಿಧಿಗಳು

ಭಾಗಿ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯುವ ಮೂರುದಿನಗಳ ಸಮ್ಮೇಳನದಲ್ಲಿ ಸುಮಾರು 8 ರಿಂದ 10 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. 1949ರಲ್ಲಿ ಸ್ಥಾಪನೆಯಾಗಿರುವ ಎಐಎಎಂಎ ನಲ್ಲಿ 600ಕ್ಕೂ ಹೆಚ್ಚಿನ ಸದಸ್ಯ ಸಂಸ್ಥೆಗಳಿದ್ದು, 3 ಸಾವಿರಕ್ಕು ಹೆಚ್ಚಿನ ಸದಸ್ಯರಿದ್ದಾರೆ. ಎಐಎಎಂಎ ಜೊತೆಗೆ ಅಗರಬತ್ತಿ ಉದ್ಯಮಕ್ಕೆ ಸಂಬಂಧಪಟ್ಟ ಮತ್ತಿತರ ಸಂಘಟನೆಗಳ ಸಹಭಾಗಿತ್ವದಲ್ಲಿ ಸಮ್ಮೇಳನ ನಡೆಯಲಿದು ್ದ, ಭಾರತ ಮಾತ್ರವಲ್ಲದೆ ವಿಯೆಟ್ನಾಂ, ಇಂಡೋನೇಷಿಯಾ ಸೇರಿದಂತೆ ಯೂರೋಪಿಯನ್ ದೇಶಗಳ ಪ್ರದರ್ಶಕರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.