ಜಿಲ್ಲೆ

ಒಳ ಮೀಸಲಾತಿ ವಿಜಯೋತ್ಸವ 13ಕ್ಕೆ: ಹರಿಹರದಿಂದ ಸಾವಿರಾರು ಜನ

ಹರ್ಷ ನ.ಪುರೋಹಿತ

ಹರಿಹರ: ದಾವಣಗೆರೆಯಲ್ಲಿ ಸೆ.13 ರಂದು ಜಿಲ್ಲಾ ಮಾದಿಗದ ಮಹಾ ಸಭಾದಿಂದ ಹಮ್ಮಿಕೊಂಡಿರುವ ಒಳ ಮೀಸಲಾತಿ ವಿಜಯೋತ್ಸವಕ್ಕೆ ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾದಿಗ ಸಮಾಜದ ಮುಖಂಡ ಎ.ಕೆ. ಭೂಮೇಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದಾವಣಗೆರೆ ನಗರದ ಮಹಾನಗರ ಪಾಲಿಕೆ ಆವರಣದಲ್ಲಿರುವ ರಾಧಮ್ಮ ಚನ್ನಗಿರಿ ರಂಗಪ್ಪ ಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ಒಳ ಮೀಸಲಾತಿ ವಿಜಯೋತ್ಸವ ಆಯೋಜನೆ ಮಾಡಲಾಗಿದೆ ಎಂದರು.

ಮುಖಂಡ ಬೂದಿಹಾಳ ರಂಗನಾಥಸ್ವಾಮಿ ಮಾತನಾಡಿ, ವಿಜಯೋತ್ಸವಕ್ಕೆ ಆಮಂತ್ರಿಸಲು ಈಗಾಗಲೇ ಹರಿಹರ ತಾಲೂಕಿನಾದ್ಯಂತ ಸಂಚರಿಸಿದ್ದು, ಮಾದಿಗ ಸಮುದಾಯದವರಿಂದ ಉತ್ತಮ ಸ್ಪಂದನೆ ದೊರೆತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಆಗಮಿಸುವ ನೀರಿಕ್ಷೆಯಿದೆ ಎಂದು ತಿಳಿಸಿದರು.

ಸಮಾಜದ ಮುಖಂಡ ಎಲ್.ಬಿ. ಹನುಮಂತಪ್ಪ ಮಾತನಾಡಿ, ವಿಜಯೋತ್ಸವದ ಅಂಗವಾಗಿ ಸೆ. 12 ರಂದು ಹರಿಹರ ನಗರದಲ್ಲಿ ಬೈಕ್ ರ‌್ಯಾಲಿ ಏರ್ಪಡಿಸಲಾಗಿದೆ. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು.