ಜಿಲ್ಲೆ

ಮಾದಿಗರಿಗೆ ಒಳಮೀಸಲಾತಿ ಜಾರಿಯಾಗಲಿ

ಬಸವರಾಜ ವೀರಪ್ಪ ಗರಗ

ಲಕ್ಷೆ್ಮೕಶ್ವರ: ಒಳ ಮೀಸಲಾತಿ ನೀಡುವಂತೆ ಮೂರು ದಶಕಗಳಿಂದ ಹೋರಾಟ ನಡೆಸಿದರೂ ರಾಜಕೀಯ ಪಕ್ಷಗಳು ಗಮನ ಹರಿಸುತ್ತಿಲ್ಲ. ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡುತ್ತಿವೆ. ಒಳಮೀಸಲಾತಿ ಜಾರಿಗೊಳಿಸಿ, ಇಲ್ಲವೇ ಕುರ್ಚಿ ಖಾಲಿ ಮಾಡಬೇಕು ಎಂದು ಕ್ರಾಂತಿಕಾರಿ ರಥಯಾತ್ರೆಯ ನೇತೃತ್ವ ವಹಿಸಿರುವ ಪ್ರಭುರಾಜ ಕೊಡ್ಲಿ ಒತ್ತಾಯಿಸಿದರು.

ಸಮೀಪದ ಶಿಗ್ಲಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಅವರು ಮಾತನಾಡಿ, ಒಳ ಮೀಸಲಾತಿ ಜಾರಿ ಆಗುವವರೆಗೂ ಯಾವುದೇ ನೇಮಕಾತಿ ಮಾಡಬಾರದು. ಮಾದಿಗ ಸಮುದಾಯಕ್ಕೆ ಅನ್ಯಾಯ ಆಗುವುದನ್ನು ತಪ್ಪಿಸಬೇಕು. ಮಾದಿಗ ಸಮುದಾಯದ ಶಾಸಕರು ಸಚಿವರು ಸಚಿವ ಸಂಪುಟದಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ಕ್ರಾಂತಿಕಾರಿ ಹೋರಾಟಗಾರರ ಮಲ್ಲೇಶ ಮಾತನಾಡಿ, ಕ್ರಾಂತಿಕಾರಿ ರಥಯಾತ್ರೆ, ಬೆಂಗಳೂರಿನ ಫ್ರೀಡಂ ಪಾರ್ಕ್​ವರೆಗೂ ಜರುಗುತ್ತಿದೆ ಎಂದರು. ಲಕ್ಷೆ್ಮೕಶ್ವರ ಹಾಗೂ ಶಿಗ್ಲಿ ಗ್ರಾಮದ ಮಾದಿಗ ಸಮಾಜದ ಮುಖಂಡರು, ಯುವಕರು ಅದ್ದೂರಿಯಾಗಿ ಯಾತ್ರೆಯನ್ನು ಸ್ವಾಗತಿಸಿದರು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.

ಎನ್.ಡಿ. ಮೇಗಲಮನಿ, ಹನುಮಂತ ಛಬ್ಬಿ, ಕರಿಯಪ್ಪ ಶಿರಹಟ್ಟಿ, ಮೈಲಾರಪ್ಪ ಡಿ.ಎಚ್., ಚಂದ್ರು ಕರಜಿಗಿ, ಮನೋಹರ ಕರಜಗಿ, ಶಿವಾನಂದ ಮೇಗಲಮನಿ, ಮಾರ್ತಾಂಡಪ್ಪ ಗಾಳಪ್ಪನವರ, ಸೋಮಣ್ಣ ಯತ್ತಿನಹಳ್ಳಿ, ಗುಡ್ಡಪ್ಪ ಮತ್ತೂರ, ಬಸವರಾಜ ಹೊಸಮನಿ, 40ಕ್ಕೂ ಹೆಚ್ಚು ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.