ಗೋಕಾಕ: ರಾಜ್ಯದಲ್ಲಿ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಬಾರದು ಎಂದು ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಅಧ್ಯಕ್ಷ ವೈ.ಕೊಟ್ರೇಶ್ ಹೇಳಿದರು.
ನಗರದ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಹಾಗೂ ಕಾರ್ಮಿಕರ ವೇದಿಕೆ ಜಿಲ್ಲಾ ಟಕದ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸ್ವಾಭಿಮಾನಿ ಭೋವಿ ವಡ್ಡರ ಜನ ಜಾಗೃತಿ ಸಮಾವೇಶದದಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಿಂದಲೂ ಗುಡ್ಡಗಳಲ್ಲಿ ಕಲ್ಲು ಒಡೆಯುವುದರ ಜತೆಗೆ ಅನಾದಿ ಕಾಲದಿಂದಲೂ ಕಟ್ಟಡ ನಿರ್ಮಾಣ ಕೆಲಸ ಕೈಗೊಂಡು ಭೋವಿ ಸಮುದಾಯ ಬದುಕು ಸಾಗಿಸುತ್ತಿದೆ. ಸರ್ಕಾರಗಳು ಒಡೆದಾಳುವ ನೀತಿ ಅನುಸರಿಸುತ್ತಿದ್ದು, ಒಳ ಮೀಸಲಾತಿ ಜಾರಿಯಾದರೆ ಸಮುದಾಯಕ್ಕೆ ತೊಂದರೆಯಾಗುತ್ತದೆ ಎಂದರು.
ಮುರುರಾಜೇಂದ್ರ ಸ್ವಾಮೀಜಿ ಮಾತನಾಡಿ, ಭೋವಿ ವಡ್ಡರ ಸಮುದಾಯಕ್ಕೆ ಆರ್ಥಿಕ ಹಾಗೂ ಶೈಣಿಕ ಸಮಾನತೆ ದೊರೆಯುವ ನಿಟ್ಟಿನಲ್ಲಿ ಸರ್ಕಾರಗಳು ಹಿತ ಕಾಪಾಡಲು ಮುಂದಾಗಬೇಕು ಎಂದು ತಿಳಿಸಿದರು. ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಜಿಪಂ ಮಾಜಿ ಸದಸ್ಯರಾದ ಆರ್.ಕಾಗಲ್, ಮಡೆಪ್ಪ ತೋಳಿನವರ, ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಪರಶುರಾಮ ಕಾಳೆ, ಜಿಲ್ಲಾಧ್ಯ ಸಂಜಯ ವಡ್ಡರ, ಮಾರುತಿ ಗಾಡಿವಡ್ಡರ, ಬಸವರಾಜ ಬಂಡಿವಡ್ಡರ, ಎಲ್.ಬಿ.ಗಾಡಿವಡ್ಡರ, ಮಹಾನಿಂಗ ಬಂಡಿವಡ್ಡರ, ಲಕ್ಕಪ್ಪ ಮಾಳಗಿ, ವಿಠ್ಠಲ ಗುಂಡಿ, ರಾಜು ಗಾಡಿವಡ್ಡರ, ಸುನೀಲ ದೋಥರೆ ಇತರರಿದ್ದರು.