ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. (ಎಚ್ಎಎಲ್) ಅಭಿವೃದ್ಧಿಸಿರುವ ಸ್ವದೇಶಿ ತಂತ್ರಜ್ಞಾನ ಆಧಾರಿತ ಇಂಟರ್ಮಿಡಿಯೆಟ್ ಜೆಟ್ ಟ್ರೇನರ್ (ಐಜೆಟಿ)ಯನ್ನು ಸೋಮವಾರ ಯಶಸ್ವಿಯಾಗಿ ಗಿರಕಿ ಪರೀಕ್ಷೆ (ಸ್ಪಿನ್ ಫ್ಲೈಟ್ ಟೆಸ್ಟ್) ಮಾಡಲಾಯಿತು.
ಫೈಟರ್ ಜೆಟ್ ಸೇರಿ ಇನ್ನಿತರ ವಿಮಾನಗಳ ಪೈಲಟ್ಗಳಿಗೆ ತರಬೇತಿ ನೀಡುವ ಸಲುವಾಗಿ ಐಜೆಟಿ ಅಭಿವೃದ್ಧಿ ಪಡಿಸಲಾಗಿದೆ. ಈ ವಿಮಾನವು ಈ ಹಿಂದಿನ ಕಿರಣ್ ಏರ್ಕ್ರ್ಟಾ್ನ ಸ್ಥಾನ ಪಡೆಯಲಿದ್ದು, ಇನ್ನು ಮುಂದೆ ಫೈಟರ್ ಜೆಟ್ ಪೈಲಟ್ಗಳಿಗೆ ಐಜೆಟಿ ಮೂಲಕ ತರಬೇತಿ ನೀಡಲಾಗುತ್ತದೆ. ಸೋಮವಾರ ಬೆಂಗಳೂರಿನಲ್ಲಿ ಎಚ್ಎಎಲ್ನ ಪರೀಕ್ಷಾ ಪೈಲಟ್ಗಳಾದ ನಿವೃತ್ತ ಗ್ರೂಪ್ ಕ್ಯಾಪ್ಟನ್ ಎಚ್.ವಿ. ಥಾಕುರ್ ಮತ್ತು ನಿವೃತ್ತ ವಿಂಗ್ ಕಮಾಂಡರ್ ಪಿ. ಅವಸ್ತಿ ಐಜೆಟಿ ಪರೀಕ್ಷೆ ನಡೆಸಿದರು. ಐಜೆಟಿಯನ್ನು ಈ ಹಿಂದೆಯೇ ಪರೀಕ್ಷೆಗೊಳಪಡಿಸಲಾಗಿತ್ತು.
ಮತ್ತೊಮ್ಮೆ ಗಿರಕಿ ಪರೀಕ್ಷೆ ನಡೆಸಲಾಗಿದೆ. ಗಿರಕಿ ಪರೀೆಯು ವಿಮಾನ ಅತಿಮುಖ್ಯ ಪರೀಕ್ಷೆಯಾಗಿದ್ದು, ಸೋಮವಾರದ ಪರೀಕ್ಷೆಯಲ್ಲಿ ಐಜೆಟಿಯನ್ನು 6 ಸುತ್ತು ಗಿರಕಿ ಹೊಡೆಸಲಾಗಿದೆ.ಅದರ ಜತೆಗೆ ಐಜೆಟಿಗೆ ಯುದ್ಧದಂತಹ ಸಂದರ್ಭದಲ್ಲಿ ಬಾಂಬ್ಗಳನ್ನು ಹಾಕುವುದು, ವಟಿರ್ಕಲ್ ಆಗಿ ಹಾರಾಟ ನಡೆಸುವುದು, ಹೆಚ್ಚುವರಿ ಸುರಕ್ಷತಾ ಕ್ರಮಗಳು ಹೀಗೆ ಹಲವು ಹೊಸ ತಂತ್ರಜ್ಞಾನ ಅಳವಡಿಸಿ ಪರೀಕ್ಷೆಗೊಳಪಡಿಸಲಾಗಿದೆ.