ಕೋಟ: ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ಹೊರಸುತ್ತಿನ ಆವರಣ ಇಂಟರ್‌ಲಾಕ್ ಅಳವಡಿಸುವ ಕುರಿತು ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದ, ದಾನಿಗಳ ಸಹಕಾರದೊಂದಿಗೆ ಗುರುವಾರ ಚಾಲನೆಗೊಂಡಿತು.
ಕೋಟದ ಅಮೃತೇಶ್ವರಿ ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ.ಕುಂದರ್, ಮಹಾತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಭಟ್ ಕಾಮಗಾರಿಗೆ ಚಾಲನೆ ನೀಡಿದರು.
ದೇಗುಲ ಪ್ರಧಾನ ಅರ್ಚಕರಾದ ಸದಾಶಿವ ಅಡಿಗ, ರಾಜೇಂದ್ರ ಅಡಿಗ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು. ಮುಂಬೈ ಸಮಾಜಸೇವಕ ಬಡಾಮನೆ ರತ್ನಾಕರ ಶೆಟ್ಟಿ, ದ.ಕ. ಮೀನುಗಾರಿಕಾ ಫೆಡರೇಶನ್ ನಿರ್ದೇಶಕ ದೇವಪ್ಪ ಕಾಂಚನ್, ಉದ್ಯಮಿ ಸುರೇಶ್ ಕಾಂಚನ್ ಬಾರಿಕೆರೆ, ಹಿರೇಮಹಾಲಿಂಗೇಶ್ವರ ಮಿತ್ರವೃಂದ ಕಾರ್ಯದರ್ಶಿ ಜಿ.ಎಸ್.ಆನಂದ್ ದೇವಾಡಿಗ, ಮಿತ್ರವೃಂದ ಪ್ರಮುಖರಾದ ಅಜಿತ್ ದೇವಾಡಿಗ, ರಾಜೇಶ್ ದೇವಾಡಿಗ, ಶಂಕರ್ ದೇವಾಡಿಗ, ಚಂದ್ರ ದೇವಾಡಿಗ, ರಕ್ಷತ್ ಆಚಾರ್ ಬೆಣ್ಣೆಕುದ್ರು, ದೇಗುಲದ ಮ್ಯಾನೇಜರ್ ಸೋಮಶೇಖರ್, ಕೋಟ ಸಿ.ಎ. ಬ್ಯಾಂಕ್ ನಿರ್ದೇಶಕರಾದ ಮಹೇಶ್ ಶೆಟ್ಟಿ ಮಣೂರು, ಭಾಸ್ಕರ್ ಶೆಟ್ಟಿ ಮಣೂರು, ಕೋಟ ಪಂಚಾಯಿತಿ ಸದಸ್ಯ ಚಂದ್ರ ಪೂಜಾರಿ, ಸಮತಾ ಸುರೇಶ್, ಇಂಟರ್‌ಲಾಕ್ ಗುತ್ತಿಗೆದಾರ ರಮೇಶ್ ಮತ್ತಿತರರು ಉಪಸ್ಥಿತರಿದ್ದರು. ಕೋಟ ಪಂಚಾಯಿತಿ ಸದಸ್ಯ ಚಂದ್ರ ಆಚಾರ್ ಕಾರ‌್ಯಕ್ರಮ ನಿರೂಪಿಸಿದರು.