ವಿಜಯವಾಣಿ ಸುದ್ದಿಜಾಲ ಧಾರವಾಡ
ಪುಸ್ತಕಗಳ ನಿರಂತರ ಅಧ್ಯಯನದಿಂದ ವಿಶೇಷ ಜ್ಞಾನ ಪಡೆಯಲು ಸಾಧ್ಯ.ಕನ್ನಡ ಭಾಷೆ ಶ್ರೀಮಂತವಾಗಿದೆ. ಕಥೆ, ಕಾದಂಬರಿ, ಕಾವ್ಯ ಮತ್ತು ವಿಶೇಷವಾಗಿ ಚುಟುಕು ಕಾವ್ಯಗಳು ವಿದ್ಯಾರ್ಥಿಗಳ ಪ್ರಭಾವಶಾಲಿ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯ ಮಾಡಲಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ಕ್ಷೇತ್ರಗಳ ಅರಿವು ತಿಳಿದುಕೊಳ್ಳುವತ್ತ ವಿದ್ಯಾರ್ಥಿಗಳು ಗಮನಹರಿಸಲಿ ಎಂದು ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್ಎಸ್ನ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಪ ಪ್ರಾಚಾರ್ಯ ಡಾ. ಸೂರಜ ಜೈನ್ ಮಾತನಾಡಿದರು. ಡಾ. ಕೆ.ಎಚ್. ನಾಗಚಂದ್ರ, ಪ್ರೊ. ವಿವೇಕ ಲಕ್ಷ್ಮೇಶ್ವರ, ಡಾ. ಆರ್.ವಿ. ಚಿಟಗುಪ್ಪಿ, ಪ್ರೊ. ಎನ್.ಜಿ.ಪುಡಕಲಕಟ್ಟಿ, ಪ್ರೊ.ಶ್ರೀಕಾಂತ ರಾಗಿಕಲ್ಲಾಪುರ, ಶ್ರವಣಕುಮಾರ ಯೋಗಿ, ಜಿನ್ನಪ್ಪ ಕುಂದಗೋಳ, ಪಲ್ಲವಿ ಸುಂಕದ, ಮಧು ದಳವಾಯಿ, ಇತರರು ಇದ್ದರು.