k.sharanareddy 
ಜಿಲ್ಲೆ

ಅ.19 ರಂದು ಇಂಟರ್‌ಕ್ಲಬ್ ಟ್ಯಾಲೆಂಟ್ ಹಂಟ್ ಪ್ರಕ್ರಿಯೆ

Raichur - Reporter - Rachhai Swamy

ರಾಯಚೂರು ಸಿಟಿ ಎಲೆವನ್ ಕ್ರಿಕೆಟ್ ಕ್ಲಬ್ ಮತ್ತು ಅಕಾಡೆಮಿಯಿಂದ ಅ.19 ರಂದು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಅಂಡರ್ 14 ಇಂಟರ್‌ಕ್ಲಬ್ ಆಯ್ಕೆಗಾಗಿ ಟ್ಯಾಲೆಂಟ್ ಹಂಟ್ ಪ್ರತಿಭಾನ್ವೇಷಣೆ ಪ್ರಕ್ರಿಯೆಯನ್ನು ಆಯೋಜನೆ ಮಾಡಲಾಗಿದೆಂದು ಕ್ಲಬ್‌ನ ಅಧ್ಯಕ್ಷ ಕೆ.ಶರಣರೆಡ್ಡಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳ್ಗೆ 8 ಗಂಟೆಯಿಂದ ನಗರದ ಎಸ್‌ಸಿಎಬಿ ಕಾನೂನು ಮಹಾವಿದ್ಯಾಲಯದಲ್ಲಿ ನೊಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಕ್ರಿಕೆಟಿಗರಿಗೆ ಕ್ಲಬ್ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತದೆ ಎಂದರು.

ಆಯ್ಕೆಯಾದ ಕ್ರಿಕೆಟಿಗರಿಗೆ ಅಂಡರ್ 14 ಕ್ಲಬ್ ಪಂದ್ಯಗಳಲ್ಲಿ ಪರಿಗಣಿಸಲಾಗುವುದು. 12 ರಿಂದ 14 ವರ್ಷದವರು ಭಾಗವಹಿಸಬಹುದಾಗಿದ್ದು, ಭಾಗವಹಿಸುವ ಆಟಗಾರರು ಕಡ್ಡಾಯವಾಗಿ ಜನನ ಪ್ರಮಾಣ ಪತ್ರ, ಆಧಾರ ಕಾರ್ಡ್ ತರಬೇಕು. ಬಿಳಿ ಬಣ್ಣದ ಕ್ರಿಕೆಟ್ ಡ್ರೆಸ ಕೋಡ್ ಪಾಲಿಸಬೇಕು ಎಂದರು.

ಈ ಸಂದರ್ಭದಲ್ಲಿ ರಾಜಶೇಖರ, ಸಂಜೀವ್, ಭರತ್ ರೆಡ್ಡಿ, ರವಿರಾಜ್ ಇದ್ದರು.