ಜಿಲ್ಲೆ

ಮಟಪಾಡಿಯಲ್ಲಿ ಇಂಟರ‌್ಯಾಕ್ಟ್ ಕ್ಲಬ್ ಪದಗ್ರಹಣ

ಇಂದಿರಾ ಎನ್ ಕೆ

ಬ್ರಹ್ಮಾವರ: ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ಇಂಟರ‌್ಯಾಕ್ಟ್ ಕ್ಲಬ್ ಪದಗ್ರಹಣ ಶಾಲಾ ಸಭಾಂಗಣದಲ್ಲಿ ಶನಿವಾರ ಜರುಗಿತು.

ಪದಪ್ರದಾನ ಅಧಿಕಾರಿ ಬ್ರಹ್ಮಾವರ ರೋಟರಿ ಅಧ್ಯಕ್ಷ ಸತೀಶ್ ಶೆಟ್ಟಿ, ಇಂಟರ‌್ಯಾಕ್ಟ್ ಕ್ಲಬ್ ಅಧ್ಯಕ್ಷೆ ಪ್ರೇರಣಾ ಪದಗ್ರಹಣ ನೆರವೇರಿಸಿದರು. ನಿಕಟ ಪೂರ್ವ ಅಧ್ಯಕ್ಷ ಅರುಣ್‌ಕುಮಾರ್ ಶೆಟ್ಟಿ ಕ್ಲಬ್‌ನ ಉದ್ದೇಶ ತಿಳಿಸಿದರು.

ರೋಟರಿ ಕ್ಲಬ್ ಸಂಯೋಜಕ ರಘುಪತಿ ಬ್ರಹ್ಮಾವರ, ಶಿಕ್ಷಕ ಸಂಯೋಜಕಿ ಜಯಲಕ್ಷ್ಮೀ ಶೆಟ್ಟಿ, ಇಂಟರ‌್ಯಾಕ್ಟ್ ಕ್ಲಬ್ ಸಭಾಪತಿ ಜಗದೀಶ್ ಕೆಮ್ಮಣ್ಣು, ರೋಟರಿ ಕಾರ್ಯದರ್ಶಿ ರೆಕ್ಷನ್ ಮೋನಿಸ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಶ್ಯಾಮಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಟರ‌್ಯಾಕ್ಟ್ ಕಾರ್ಯದರ್ಶಿ ಅನನ್ಯ ವಂದಿಸಿದರು.