ಜೊಯಿಡಾ: ಅಂತಾರಾಜ್ಯ ಡಕಾಯಿತ ತಂಡದ ಇಬ್ಬರನ್ನು ರಾಮನಗರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಖಚಿತ ಮಾಹಿತಿಯಂತೆ ಅನಮೊಡದಲ್ಲಿ ಗೊವಾದಿಂದ ಬಸ್ ನಲ್ಲಿ ಬರುತ್ತಿದ್ದ 5 ಜನ ಢಕಾಯಿತರನ್ನ ಹಿಡಿಯಲು ಎಸ್ ಪಿ ಎಂ.ನಾರಾಯಣ ಮಾರ್ಗದರ್ಶನದಲ್ಲಿ
ಜೊಯಿಡಾ ಸಿಪಿಐ ಚಂದ್ರಶೇಖರ ಹರಿಹರ ಮತ್ತು ರಾಮನಗರಪಿಎಸ್ಐ ಬಸವರಾಜ ಮಬನೂರ ಇವರ ತಂಡ ಪ್ರಯತ್ನಿಸುತ್ತಿರುವ ವೇಳೆ ಇಬ್ಬರನ್ನು ಮಾತ್ರ ಬಂಧಿಸಲಾಗಿದೆ. ಮೂವರು ತಪ್ಪಿಸಿಕೊಂಡಿದ್ದಾರೆ.
ರಾಜಸ್ಥಾನ ಮೂಲದ ಗೋವರ್ದನ ಸಿಂಗ್ ರಾಜಪುರೊಹಿತ ಮತ್ತು ಶಾಮಲಾಲ್ ಮೇಘವಾಲ್ ಬಂಧಿತರು. ಅವರಿಂದ ಎರಡು ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾಪತ್ತೆಯಾದ ಮೂವರಿಗೆ ಶೋಧ ಕಾರ್ಯ ನಡೆಯುತ್ತಿದೆ.
ಗೊವಾದಲ್ಲಿನ ಗೊವಾ ಸ್ಟಾರ್ ಜುವಲರಿ ಶಾಪ್ ಕಳ್ಳತನ ಮಾಡಲು ಬಂದ ಢಕಾಯಿತರ ತಂಡ ಇದಾಗಿದ್ದು,ಕಳ್ಳತನ ಮಾಡಲು ಸಾದ್ಯವಾಗದೆ ವಾಪಸ್ ಅನಮೊಡದಿಂದ ತೆರಳುತ್ತಿದ್ದಾಗ ಪೊಲಿಸರ ಕೈಗೆ ಸಿಕ್ಕಿದ್ದಾರೆ ಎನ್ನಲಾಗುತ್ತಿದೆ.