ಜಿಲ್ಲೆ

22ರಂದು ಅಂತಾರಾಜ್ಯ ಕಸಾಪ ಸಮ್ಮೇಳನ

ತುಮಕೂರು ಡೆಸ್ಕ್

ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಆಯೋಜನೆ

ಪಾವಗಡ : ಅಮರಾಪುರ, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಟಕಗಳಿಂದ ಕನ್ನಡ ಸಾಹಿತ್ಯ ಪರಿಷತ್​ನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಅಂತಾರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆ.22ರಂದು ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಆಯೋಜಿಸಲಾಗಿದೆ ಎಂದು ಆಂಧ್ರಪ್ರದೇಶ ಗಡಿನಾಡು ಕನ್ನಡ ಸಾಹಿತ್ಯ ಪರಿಷತ್​ ಟಕದ ಅಧ್ಯ ಅಂಜನ್​ ಕುಮಾರ್​ ತಿಳಿಸಿದ್ದಾರೆ.

ಆಂಧ್ರದ ಮಡಕಶಿರಾ ತಾಲೂಕಿನ ಅಮರಾಪುರ ಗ್ರಾಮದ ಆಂಧ್ರ ಟಕದ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀ ರಾವೇಂದ್ರ ಸ್ವಾಮಿಗಳ ಮಠದ ಪೀಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅಪ್ಪಣೆ ಮೇರೆಗೆ ಕಸಾಪ ಟಕಗಳೆಲ್ಲವೂ ಸೇರಿ 22ರಂದು ಒಂದು ದಿನದ ಅಂತಾರಾಜ್ಯ ಸಾಹಿತ್ಯ ಸಮ್ಮೇಳನ ನಡೆಸಲು ನಿಶ್ಚಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ಉದ್ಘಾಟನೆ ಹಾಗೂ ಸಮಾರೋಪವು ಮಂತ್ರಾಲಯದ ಶ್ರೀ ರಾವೇಂದ್ರ ಸ್ವಾಮಿಗಳ ಮಠದ ಪೀಠಾಧೀಶರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್​ ಅಧ್ಯ ನಾಡೋಜ ಡಾ.ಮಹೇಶ ಜೋಶಿ ಮತ್ತು ಅಯೋಧ್ಯೆಯ ರಾಮಲಲ್ಲಾ ಶಿಲ್ಪಿ ಅರುಣ್​ ಯೋಗಿರಾಜ್​, ಸಾಹಿತಿ ಡಾ.ಪ್ರದಿಪ್​ ಕುಮಾರ್​ ಹೆಬ್ರಿ ಅವರು ಸಮ್ಮೇಳನ ಅಧ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಪ್ರತಿ ರಾಜ್ಯ ಟಕಗಳಿಂದ ಈ ಸಮ್ಮೇಳನಕ್ಕೆ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯಕ್ಕೆ ಗಡಿನಾಡ ಕನ್ನಡಿಗರ ಕೊಡುಗೆ&ವಿಚಾರಗೋಷ್ಠಿ, ಕುಮಾರವ್ಯಾಸ ಭಾರತದ ಗಮಕ ವಾಚನ ಮತ್ತು ವ್ಯಾಖ್ಯಾನ ಗೋಷ್ಠಿ, ಬಹುಭಾಷಾ ಕವಿಗೋಷ್ಠಿ ಮುಂತಾದ ವಿಷಯಗಳು ಒಳಗೊಂಡಂತೆ ವಿನೂತನವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

22ರಂದು ಬೆಳಗ್ಗೆ 8ಕ್ಕೆ ಧ್ವಜಾರೋಹಣ (ರಾಜ್ಯ, ಪರಿಷತ್ತು, ದೇಶದ ಧ್ವಜಗಳು), 8.30ಕ್ಕೆ ಮೆರವಣಿಗೆ,

9.30ಕ್ಕೆ ಶ್ರೀಪಾದರಿಂದ ಉದ್ಘಾಟನೆ, ಸಂಜೆ 5 ಗಂಟೆಗೆ ಸಮಾರೋಪ ನಡೆಯಲಿದೆ. ಆಂಧ್ರಪ್ರದೇಶದ ಗಡಿನಾಡು ಕಸಾಪ ಟಕ ಅಧ್ಯ ಅಂಜನ್​ ಕುಮಾರ್​, ತೆಲಂಗಾಣದ ಅಧ್ಯ ಡಾ.ಗುಡಿಗುಂಟಿ ವಿಠ್ಠಲ, ಮಹಾರಾಷ್ಟ್ರದ ಅಧ್ಯ ಸೋಮಶೇಖರ್​ ಜಮಶೆಟ್ಟಿ, ಗೋವಾ ಅಧ್ಯ ಸಿದ್ದಣ್ಣ ಮೇಟಿ ಹಾಗೂ ಚಿಕ್ಕಮಗಳೂರು ಜಿಲ್ಲಾಧ್ಯ ಸೂರಿ ಶ್ರೀನಿವಾಸ ನೇತೃತ್ವದಲ್ಲಿ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.