ಜಿಲ್ಲೆ

ಅಂತರ್​ ಶಾಲಾ ಪಂದ್ಯಾವಳಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನದ ನಿಮಿತ್ತ ಅಂತರ್​ ಶಾಲಾ ಕಬಡ್ಡಿ ಹಾಗೂ ವಾಲಿಬಾಲ್​ ಪಂದ್ಯಾವಳಿಯನ್ನು ಶುಕ್ರವಾರ ಆಯೋಜಿಸಲಾಗಿತ್ತು.
ಶಾಲೆ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ ಪಂದ್ಯಾವಳಿಗೆ ಚಾಲನೆ ನೀಡಿದರು. ಪಂದ್ಯಾವಳಿಯಲ್ಲಿ 9 ಶಾಲೆಗಳು ಸ್ಪರ್ಧಿಸಿದ್ದವು. ವಾಲಿಬಾಲ್​ ಪಂದ್ಯಾವಳಿಯಲ್ಲಿ ಕೋಟೂರಿನ ಸರ್ಕಾರಿ ಪ್ರೌಢ ಶಾಲೆ (ಪ್ರಥಮ), ರಾಷ್ಟ್ರೊತ್ಥಾನ ವಿದ್ಯಾಕೇಂದ್ರ (ದ್ವಿ) ಸ್ಥಾನ ಪಡೆದವು. ಕಬಡ್ಡಿ ಪಂದ್ಯಾವಳಿಯಲ್ಲಿ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರ (ಪ್ರ), ಕುರುಬಗಟ್ಟಿ ಸರ್ಕಾರಿ ಪ್ರೌಢ ಶಾಲೆ (ದ್ವಿ) ಸ್ಥಾನ ಪಡೆದವು.
ಶಾಲೆ ಪ್ರಾಚಾರ್ಯೆ ಡಾ. ಅನಿತಾ ರೈ, ಉಪ ಪ್ರಾಚಾರ್ಯ ಕೃಷ್ಣ ಜೋಶಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.