ಅಂತರ್‌ದೃಷ್ಟಿ ಬ್ರೈನ್ ಅಕಾಡೆಮಿ, ಪರಮಹಂಸ ಯೋಗ ಮಹಾವಿದ್ಯಾಲಯ ಹಾಗೂ ಮೈಸೂರು ಯೋಗ ಒಕ್ಕೂಟಗಳ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಅಂತರ ಶಾಲಾ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಶಿವಪ್ರಕಾಶ್ ತಿಳಿಸಿದರು.
ಆ.13ರಂದು ಬೆಳಗ್ಗೆ ರಾಮಕೃಷ್ಣ ನಗರ ಇ ಮತ್ತು ಎಫ್ ಬ್ಲಾಕ್‌ನ ಯೋಗ ಪಾರ್ಕ್ ಬಳಿಯ ಪರಮಹಂಸ ಯೋಗ ಮಹಾ ವಿದ್ಯಾಲಯದಲ್ಲಿ ಸ್ಪರ್ಧೆ ನಡೆಯಲಿದೆ. ಒಂದರಿಂದ ನಾಲ್ಕು, ಐದರಿಂದ ಏಳು ಹಾಗೂ ಎಂಟರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಜೇತರಿಗೆ ಬಹುಮಾನ ನೀಡಲಾಗುವುದು. ಹೆಸರು ನೋಂದಾಯಿಸಿಕೊಳ್ಳಲು ಆ.10 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ಮೊ. 90355 06790 ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ಡಾ.ಬಿ.ಪಿ.ಮೂರ್ತಿ, ಡಾ.ಚಂದ್ರಶೇಖರ್, ಡಾ.ಲಕ್ಷ್ಮೀ ಶ್ರೀನಿವಾಸ್, ಶಾಂತಾರಾಂ, ಸುಂದರ್‌ರಾಜ್ ಹಾಜರಿದ್ದರು.