ಜಿಲ್ಲೆ

ಪೊಲೀಸ್‌ ಸಿಬ್ಬಂದಿ ಅಂತರ ಜಿಲ್ಲಾ ವರ್ಗಾವಣೆ -ಗೃಹ ಸಚಿವ ಜಿ.ಪರಮೇಶ್ವರ ಪ್ರತಿಕ್ರಿಯೆ

ಭಟ್ಕಳ: ಪೊಲೀಸ್ ಲಾಖೆಯನ್ನು ಹೊಸ ತಂತ್ರಜ್ಞಾನಗಳಿಂದ ಆಧುನೀಕರಣಗೊಳಿಸುವ ಕಾರ್ಯ ನಡೆದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ಶಹರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ 12 ಪೊಲೀಸ್ ವಸತಿಗೃಹಗಳನ್ನು ಉದ್ಘಾಟಿಸಿ, ಸಿಬ್ಬಂದಿಗೆ ಚಾವಿ ಹಸ್ತಾಂತರ ಮಾಡಿ ಅವರು ಮಾತನಾಡಿದರು. ಸಾವಿರಾರು ಸಿಸಿ ಕ್ಯಾಮರಾಗಳು ಹಾಗೂ ಅದಕ್ಕೆ ಬೇಕಾದ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಪ್ರತಿ ಪೊಲೀಸ್ ಠಾಣೆಯಲ್ಲೂ ಸಿಸಿ ಕ್ಯಾಮರಾ ಅಳವಡಿಸಿ, ಅದನ್ನು ಕೇಂದ್ರ ಕಚೇರಿಯಿಂದ ವೀಕ್ಷಣೆ ಮಾಡುವ ಹಾಗೂ ನಿಯಂತ್ರಿಸುವ ತಂತ್ರಜ್ಞಾನ ನಾವು ಹೊಂದಿದ್ದೇವೆ. ಶೀಘ್ರದಲ್ಲಿ ಎಲ್ಲ ಬದಲಾವಣೆ ಮಾಡುತ್ತಿದ್ದೇವೆ ಎಂದರು.
ಇದುವರೆಗೆ ರಾಜ್ಯದಲ್ಲಿ 46 ಸಾವಿರ (ಶೇ.40 ರಷ್ಟು) ವಸತಿಗೃಹಗಳನ್ನು ನಿರ್ಮಾಣ ಮಾಡಲಾಗಿದೆ. 2025 ರಲ್ಲಿ ಈ ಪ್ರಕ್ರಿಯೆ ಮುಂದುವರಿಯಲಿದ್ದು, ಶೇ.100 ಪೊಲೀಸ್ ಸಿಬ್ಬಂದಿಗೆ ವಸತಿಗೃಹ ಒದಗಿಸಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದರು.

ಪೊಲೀಸ್‌ ಸಿಬ್ಬಂದಿ ಅಂತರ ಜಿಲ್ಲಾ ವರ್ಗಾವಣೆ ಮಾಡಲಾಗುತ್ತದೆಯೇ..? ಅದಕ್ಕಾಗಿ ರೂಪಿಸಿದ ಆಪ್‌ ಕತೆಯೇನು ಎಂಬ ಪ್ರಶ್ನೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಇಲಾಖೆಗೂ ಬೇರೆ ಇಲಾಖೆಗೂ ವ್ಯತ್ಯಾಸವಿದೆ. ಪತಿ, ಪತ್ನಿ ಪ್ರಕರಣ, ಅನಾರೋಗ್ಯ ಮುಂತಾದ ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ನಾವು ಪೊಲೀಸ್ ಸಿಬ್ಬಂದಿಯನ್ನು ಅಂತರ ಜಿಲ್ಲಾ ವರ್ಗಾವಣೆ ಮಾಡುವುದು ಕಡಿಮೆ. ಏಕೆಂದರೆ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ತೊಂದರೆ ಉಂಟಾಗುತ್ತದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್, ಎಸ್‌ಪಿ ಎನ್.ವಿಷ್ಣುವರ್ಧನ ಇದ್ದರು.


ಜಾತಿ ಪ್ರಮಾಣಪತ್ರ ಪರ, ವಿರೋಧನ ಮನವಿ
ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಸಮುದಾಯದ ಪ್ರಮುಖರು ಹಾಗೂ ಶಾಲಾ ವಿದ್ಯಾರ್ಥಿಗಳು ಗೃಹ ಸಚಿವ ಜಿ.ಪರಮೇಶ್ವ ಅವರಿಗೆ ಮನವಿ ಸಲ್ಲಿಸಿದರು. ಅದಕ್ಕೂ ಪೂರ್ವದಲ್ಲಿ ದಲಿತ ಸಂರ್ಘ ಸಮಿತಿಯ ಪದಾಽಕಾರಿಗಳು ಸಚಿವರನ್ನು ಭೇಟಿ ಮಾಡಿ, ಮೊಗೇರರಿಗೆ ಜಾತಿ ಪ್ರಮಾಣಪತ್ರ ನೀಡುವ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದರು. ಪರಿಶಿಷ್ಟರಲ್ಲದವರು ಪಡೆದಿರುವ ಜಾತಿ ಪ್ರಮಾಣಪತ್ರಗಳನ್ನು ರದ್ದು ಮಾಡುವಂತೆ ಒತ್ತಾಯಿಸಿದರು. ಕಾರವಾರ ಕ್ರಿಮ್ಸ್ನಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ತೋರಿಸದೇ ರೋಷ್ಟರ್ ಆಧಾರದ ಮೇಲೆ ವೈದ್ಯರ ನೇಮಕಾತಿ ಮಾಡಲಾಗುತ್ತಿದೆ. ಇದರಿಂದ ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗುತ್ತಿದ್ದು, ಈ ಕುರಿತು ಪ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯ ದೀಪಕ ಕುಡಾಳಕರ್‌ ನೇತೃತ್ವದಲ್ಲಿ ತುಳಸಿದಾಸ ಪಾವಸ್ಕರ್‌, ರವೀಂದ್ರ ಮಂಗಳ, ಮಾರುತಿ ಪಾವಸ್ಕರ್‌ ಇದ್ದರು.