ಜಿಲ್ಲೆ

31ರಂದು ಅಂತರ್ ಜಿಲ್ಲಾ ಚೆಸ್ ಪಂದ್ಯಾವಳಿ ಮುಂಚಿತವಾಗಿ ನೊಂದಾವಣೆ ಕಡ್ಡಾಯ

reportermng

ಮಂಗಳೂರು: ದಕ್ಷಿಣ ಕನ್ನಡ ಚೆಸ್ ಅಸೋಸಿಯೇಶನ್ 2ನೇ ಅಂತರ್ ಜಿಲ್ಲಾ ಮುಕ್ತ ರ‌್ಯಾಪಿಡ್ ಚೆಸ್ ಪಂದ್ಯಾವಳಿ 2021ನ್ನು ಅ.31ರಂದು ಬೆಳಗ್ಗೆ 9 ಗಂಟೆಯಿಂದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದೆ.
ದ.ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಹಾಗು ಚಿಕ್ಕಮಗಳೂರು ಜಿಲ್ಲೆಗಳ ಸ್ಪರ್ಧಾಳುಗಳಿಗೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ವಿಜೇತರಿಗೆ ಒಟ್ಟು 50 ಸಾವಿರ ರೂ. ನಗದು ಬಹುಮಾನ ಹಾಗು ಟ್ರೋಫಿ ವಿತರಿಸಲಾಗುವುದು. ಸಂಜೆ 5.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
7, 9, 11, 13, 15 ವರ್ಷದೊಳಗಿನವರಿಗೆ ಆಯಾ ವಿಭಾಗಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ. ಸ್ಪರ್ಧಾಳುಗಳಿಗೆ ಹಾಗು ಜತೆಗೆ ಬರುವ ಪೋಷಕರಿಗೆ ಊಟ, ತಿಂಡಿಯ ವ್ಯವಸ್ಥೆ ಸಂಘಟಕರು ಮಾಡಲಿದ್ದಾರೆ. ವಯೋಮಾನ ವಿಭಾಗದವರಿಗೆ 400 ರೂ. ಹಾಗು ಮುಕ್ತ ವಿಭಾಗದವರಿಗೆ 500 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಆಟಗಾರರು ಸ್ವತಃ ಚೆಸ್ ಸೆಟ್ಸ್ ಮತ್ತು ಚೆಸ್ ಕ್ಲಾಕ್ಸ್ ತರಬೇಕು.
ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ಮುಂಚಿತವಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವುದು ಕಡ್ಡಾಯ. ನೊಂದಣಿಗೆ  www.chessfee.com, 9141535392, 9448770701 ಗೆ ಸಂಪರ್ಕಿಸಬಹುದು ಎಂದು ಚೆಸ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ ತಿಳಿಸಿದ್ದಾರೆ.