ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಉದ್ದೇಶ ಪೂರ್ವಕವಾಗಿ ಲಾಠಿ ಜಾರ್ಜ್ ಮಾಡಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಸುವರ್ಣ ವಿಧಾನಸೌಧ ಬಳಿಯ ಕೊಂಡಸಕೊಪ್ಪ ಗ್ರಾಮದಲ್ಲಿ ಗುರುವಾರ ಪ್ರತಿಭಟನಾನಿರತರ ಮನವಿ ಆಲಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಹೋರಾಟದ ವೇಳೆ ಮೃತರಾದ ರೈತರ ಬಗ್ಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಯಾಕೆ ಮಾತನಾಡಲ್ಲ ಎಂದು ಪ್ರಶ್ನಿಸಿದರು. ಹೋರಾಟ ಮಾಡುವುದು ಅವರ ಹಕ್ಕು ಮಾಡಲಿ. ಸರ್ಕಾರ ಬೇಕು ಅಂತಾ ಲಾಠಿಜಾರ್ಜ್ ಮಾಡಿಲ್ಲ ಎಂದು ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿ ಪ್ರಹಾರವನ್ನು ಸಮರ್ಥಿಸಿಕೊಂಡರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಿಂದುತ್ವ, ಲಿಂಗಾಯತ, ಪಂಚಮಸಾಲಿ ಎಂದು ಮಾತನಾಡುತ್ತಾರೆ, ಒಬ್ಬರ ಮೇಲೆ ಒಬ್ಬರು ಟೋಪಿ ಹಾಕಬಾರದು ಎಂದರು.
ಪ್ರಜಾಪ್ರಭುತ್ವದಲ್ಲಿ ಮೀಸಲಾತಿಗಾಗಿ ಪ್ರತಿಭಟನೆ ನಡೆಸುವುದು, ಹೋರಾಟ ಮಾಡುವುದು ಹಕ್ಕು. ಮೀಸಲಾತಿ ವಿಚಾರಗಳು ಮುಗಿಯದ ವಿಚಾರ ಎಂದರು.