ಕೆಜಿಎಫ್-: ಬೆಮೆಲ್ ನಗರದ ಬಳಿಯಿರುವ 294 ಎಕರೆ ಜಾಗದಲ್ಲಿ ಇಂಟಿಗ್ರೇಟೆಡ್ ಟೌನ್ಶಿಪ್ ನಿಮಾರ್ಣ ಮಾಡಲು ಯೋಜನೆ ರೂಪಿಸಿದ್ದು, ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಚೆನ್ನೆ$ ಎಕ್ಸ್ಪ್ರೆಸ್ ಹೈವೇ ಪಕ್ಕದಲ್ಲಿರುವ 294 ಎಕರೆ ಇಂಟಿಗ್ರೇಟೆಡ್ ಟೌನ್ಶಿಪ್ಪ್ರದೇಶಕ್ಕೆ ಎಕ್ಸ್ಪ್ರೆಸ್ ಹೈವೆಯಿಂದ ನೇರವಾಗಿ 30 ಅಡಿ ರಸ್ತೆ ನಿರ್ಮಿಸಲು ಅಗತ್ಯವಾದ 11 ಎಕರೆ ಸರ್ಕಾರಿ ಗೋಮಾಳ ಜಾಗ ಉಪಯೋಗಿಸಿಕೊಂಡು ಸಮಗ್ರ ನೀಲಿ ನಕ್ಷೆ ತಯಾರಿಸುವಂತೆ ತಹಸೀಲ್ದಾರ್ಗೆ ಸೂಚಿಸಿದರು.
294 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಇಂಟಿಗ್ರೇಟೆಡ್ ಟೌನ್ಶಿಪ್ ಜಾಗದಲ್ಲಿ ಮರಗಿಡಗಳ ತೆರವು, ರಸ್ತೆ, ನಿಮಾರ್ಣ, ವಾಣಿಜ್ಯ ಕಟ್ಟಡದ ನಿವೇಶನಗಳ ವಿಂಗಡಣೆ ಹಾಗೂ ಇನ್ನಿತರ ಕಾಮಗಾರಿಗಳಿಗೆ ನಗರಾಭಿವೃದ್ಧಿ ಇಲಾಖೆಯಿಂದ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸಿ ಟೌನ್ಶಿಪ್ ನಿಮಾರ್ಣ ಮಾಡಲಾಗುವುದೆಂದು ತಿಳಿಸಿದರು.
ಈ ಯೋಜನೆಯಲ್ಲಿ ಜನತೆಗೆ ಉತ್ತಮ ಮೂಲ ಸೌಲಭ್ಯ, ಆರಾಮದಾಯಕ ವಾಸಸ್ಥಳ ಮತ್ತು ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಒದಗಿಸಲು ಉದ್ದೇಶಿಸಲಾಗಿದ್ದು, ಈ ಟೌನ್ಶಿಪ್ ಯೋಜನೆ ಅತ್ಯಾಧುನಿಕ ಮೂಲ ಸೌಲಭ್ಯಗಳೊಂದಿಗೆ ವಾಣಿಜ್ಯ ಕೇಂದ್ರಗಳು, ಶಿಕ್ಷಣ ಮತ್ತು ಆರೋಗ್ಯ ಸೇವೆಗಳು, ಉದ್ಯಾನವನಗಳು ಮತ್ತು ಪರಿಸರ ಸ್ನೇಹಿ ವಸತಿ ಸೌಲಭ್ಯಗಳು ಒಳಗೊಂಡಿರುತ್ತವೆ ಎಂದು ತಿಳಿಸಿದರು. ಸಮಗ್ರ ಟೌನ್ಶಿಪ್ ಯೋಜನೆಯಲ್ಲಿ ಉದ್ಯೋಗಾವಕಾಶ ಹಾಗೂ ಸಮುದಾಯದ ಸಾಂಸತಿಕ ಮತ್ತು ಸಾಮಾಜಿಕ ಜೀವನ ಶೈಲಿ ಉತ್ತೇಜಿಸಲು ಯೋಜಿಸಲಾಗಿದ್ದು, ಯೋಜನೆಯು ಕೆಜಿಎಫ್, ಬಂಗಾರಪೇಟೆ ಎರಡು ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು, ಕಲ್ಯಾಣ ಕಾರ್ಯಕ್ರಮ ಪ್ರಾರಂಭಿಸುವುದಾಗಿ ತಿಳಿಸಿದರು.